ಈ ಪುಂಡ - ಪತ್ರಕರ್ತ, ಮಾನವ ಹಕ್ಕು ಸಂಘಟನೆಯ ಸದಸ್ಯನೂ ಆಗಿದ್ದ!
ಇದೆ ಕಾರಣಕ್ಕೆ , ಯಾವುದೇ ಪೋಲಿಸ್ ಕಾರ್ಯಾಚರಣೆ ನಡೆದರೂ...ಮಾನವ ಹಕ್ಕು ಉಲ್ಲಂಘನೆಯ ಗುಲ್ಲನ್ನು ಮಾನವ ಹಕ್ಕುಗಳ ಗುತ್ತಿಗೆ ಪಡೆದ, ಎಡ ಪಂಥೀಯ ಬುದ್ದಿ ಜೀವಿಗಳು ಎಬ್ಬಿಸುತ್ತಾರೆ!

ಇನ್ನೂ ಆಘಾತಕಾರಿ ವಿಷಯ ಇಲ್ಲಿದೆ...ನಕ್ಸಲರ ಯಾವುದೇ ಅನಾಚಾರ ನಡೆದರೂ ಸುಮ್ಮನೆ ಇದ್ದು, ನಕ್ಸಲರ ಹತ್ಯೆ ಆದರೆ "ಮಾನವ ಹಕ್ಕು ಉಲ್ಲಂಘನೆ" ಎಂದು ಬೋಬ್ಬಿರಿಯುವ ಸ್ವಘೋಷಿತ ಬುದ್ದಿ ಜೀವಿಗಳು, ಸತ್ಯ ಶೋಧನ ಸಮಿತಿ ಮಾಡುವ ಬೊಗಳೆ ಪ್ರೊಫೆಸರ್ಗಳು, ನಕ್ಸಲ್ ವಾದಕ್ಕೆ ಪುಕ್ಕಟೆ ಪ್ರಚಾರ ನೀಡಿ, ಪೋಲೀಸರನ್ನು ಹೀಗಳೆಯುವ ಪತ್ರಕರ್ತರು/ ಪತ್ರಿಕೆಗಳು - ಎಲ್ಲರೂ ಈ ನಕ್ಸಲರಿಂದ "ಸಂಬಳ" ಪಡೆಯುವವರೇ! 

ಡೋಂಗಿ ನಕ್ಸಲರಿಂದ ಭೂಕಬಳಿಕೆ ಮಾಡುವವರಿಗೆ, ಕೇರಳದಿಂದ ಬಂದು ಕಾಡು ಕಡಿದು ರಬ್ಬರ್ ತೋಟ ಮಾಡುವ ವ್ಯಕ್ತಿಗಳಿಗೆ ಮಾತ್ರ ಉಪಕಾರ...ಅಂದರೆ...ನಕ್ಸಲ್ ಗುಮ್ಮ ಹುಟ್ಟಿಸಿ ಭೂಮಿಯ ಬೆಲೆ ತಗ್ಗಿಸುವ ಹುನ್ನಾರ...
ಈ ಆಘಾತಕಾರಿ ಸುದ್ದಿ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ...
ಬೊಬ್ಬಿಡುವ ಬುದ್ದಿ ಜೀವಿಗಳು/ ಪರಿಸರ ವಾದಿಗಳು ಈಗ ಎಲ್ಲಿದ್ದಾರೆ?
1 comment:
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಹೋರಾಟದ ಹೆಸರಲ್ಲಿ ಪ್ರಗತಿಪರರೆಂದು ಹೇಳಿಕೊಂಡ ಶಕ್ತಿಗಳೇ ಈಗ ನಕ್ಗಲ್ ಗಳಾಗಿ ಹೊರಬರುತ್ತಿರುವುದು ಸೋಜಿಗದ ಸಂಗತಿ.
ನಾಡಲ್ಲಿ ಸಭ್ಯರಂತೆ ಪತ್ರಕರ್ತ, ಉಪನ್ಯಾಸಕರೆಂದು ಓಡಾಡಿಕೊಂಡಿರುವ ಇವರ ಹಿಂದಿನ ಶಕ್ತಿಗಳು ಯಾರೆಂಬುದನ್ನು ಸರಕಾರ ಹುಡುಕಬೇಕಾಗಿದೆ.
ಯಾವುದೋ ಹಳ್ಳಿಗಾಡಿನ ಮೂಲದಿಂದ ಬಂದ ಮೃತ ನಕ್ಸಲ್, ನೇಪಾಳದಂತಹ ದೂರ ಪ್ರದೇಶಕ್ಕೆ ಹೋಗಿ ತರಬೇತಿ ಪಡೆದು ಬಂದಿರುವುದು ಕೇವಲ idealism ಆಧಾರದ ಮೇಲೆಯೇ? ಅಥವಾ ಯಾರೋ brainwash ಮಾಡಿದಂತಹ ಕೆಲಸವೇ?
ಮುಗ್ಧ ಹಳ್ಳಿ ಯುವಕರನ್ನು ಹೋರಾಟದ ಹೆಸರಲ್ಲಿ ತಲೆ ಕೆಡೆಸುತ್ತಿರುವ ಉಪನ್ಯಾಸಕರು, "ಪ್ರಗತಿಪರ ಹೋರಾಟಗಾರರು", "ಪತ್ರಕರ್ತರು", "ಚಿಂತಕರು" - ಇವರೆಲ್ಲರ ಹಿಂದಿರುವ ಸ್ಥಾಪಿತ ಹಿತಾಸಕ್ತಿಗಳು ಯಾರೆಂಬುದರ ಬಗ್ಗೆ ಅಮೂಲಾಗ್ರ ತನಿಖೆ ನಡೆಯುಬೇಕಾಗಿದೆ.
Post a Comment