Sunday, November 23, 2008

ಕೊಳಂಬೆ ಶಾಂತಿ ನಗರ ಮದೀನ ಮಸೀದಿಯಲ್ಲೊಂದು ಆತ್ಮೀಯ ಸಮ್ಮಾನ
ಉಡುಪಿ: ರಾಜ್ಯ ಗೃಹ ಸಚಿವ ವಿ.ಎಸ್. ಆಚಾರ್ಯ ಅವರನ್ನು ಬೈಲೂರು ಕೊಳಂಬೆ ಮದೀನ ಮಸೀದಿಯ ವತಿಯಿಂದ ಶನಿವಾರ ಸನ್ಮಾನಿಸಲಾಯಿತು. ಮಸೀದಿಯ ಅಧ್ಯಕ್ಷ ಅಬ್ದುಲ್ ಗಫೂರ್ ಅವರು ಸಚಿವರನ್ನುಶಾಲು ಹೊದಿಸಿ ಸ್ಮರಣಿಕೆ ನೀಡಿ ಅಭಿನಂದಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ಹಾಜಿ ಟಿ. ಎಸ್. ಬುಡಾನ್ ಭಾಷಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಧಾಕರ ಶೆಟ್ಟಿ, ಪೌರಾಯುಕ್ತ, ಗೋಕುಲದಾಸ್ ನಾಯಕ್, ಉಡುಪಿ ಜಾಮೀಯ ಮಸೀದಿಯ ಅಡಳಿತಾಧಿಕಾರಿ ಮುಹಮ್ಮದ್ ಸಲೀಂ, ಬಿಜೆಪಿ ಅಲ್ಪಸಂಖ್ಯಾತ ರಾಜ್ಯ ಸಮಿತಿ ಸದಸ್ಯ ಕರಾಮತ್ ಅಲಿ, ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ವಿಶ್ವನಾಥ ಮಾಡ, ನಗರಸಭಾ ಸದಸ್ಯ ನಿತ್ಯಾನಂದ ಒಳಕಾಡು ಉಪಸ್ತಿತರಿದ್ದರು. ಮಸೀದಿಯ ಮೌಲಾನ ಶೌಕತ್ ಅಲಿ ರಝ್ವಿ ಕುರಾನ್ ಪಠಿಸಿದರು. ಉಸ್ಮಾನ್ ಅಲಿ ಕಾರ್ಯಕ್ರಮ ನಿರೂಪಿಸಿದರು
(ವರದಿ ವಾರ್ತಾ ಭಾರತಿ/ ಗಲ್ಫ್ಕನ್ನಡಿಗ+ ಚಿತ್ರ: ಜನಾರ್ದನ್ ಕೊದವೂರ್)

No comments: