ಉಡುಪಿಯ ರಥ ಬೀದಿಯಲ್ಲಿರುವ ಕನಕ ಮಂಟಪ...(ಶ್ರೀ ಕೃಷ್ಣ ಉಚಿತ ಚಿಕಿತ್ಸಾಲಯದ ಬಳಿಯಲ್ಲಿದೆ)


ಉಡುಪಿಗೆ ಬಂದ ಯಾವನೇ ಭಕ್ತನಿಗೂ ಗೋಚರಿಸುವ ಸಂಗತಿಗಳು, ಕೆಲ ಅಜ್ಞಾನಿ ರಾಜಕಾರಣಿಗಳಿಗೆ ತಿಳಿಯದೆ, ಏನೇನೋ ಪ್ರಲಾಪ ಮಾಡುತ್ತಾರೆ... ಇಡಿಯ ರಾಜ್ಯ ಕನಕ ಜಯಂತಿಯಂದು ಸಂಭ್ರಮಿಸುತ್ತಿರುವಾಗ ಸಂತೋಷಕ್ಕೆ ಹುಳಿಹಿಂಡುವ ಪ್ರಯತ್ನ ಮಾಡುತ್ತಾರೆ! ಒಟ್ಟಾರೆ ತಮ್ಮ ಅಜ್ಞಾನ ಪ್ರದರ್ಶಿಸುತ್ತ್ತಾರೆ...ಅದಕ್ಕೆ ಬುದ್ದಿ ಜೀವಿಗಳು (ಕೆಲ ಲೆಟರ್ ಹೆಡ್ ಸಂಘಟನೆಗಳೂ ಸೇರಿ) ತಮ್ಮ ಕೊಡುಗೆ ನೀಡುವ ಮುನ್ನ ಈ ಬರಹ...
ಕನಕದಾಸರೆ ಹೇಳಿದಂತೆ ....
ಕನಕದಾಸರೆ ಹೇಳಿದಂತೆ ....
ಬಲ್ಲವರೇ ಬಲ್ಲರು ಎಲ್ಲವರಿಯರು...
(ಕನಕದಾಸರ ಇನ್ನಷ್ಟು ರಚನೆಗಳು ಅಂತರ್ಜಾಲದಲ್ಲಿ ಲಭ್ಯ: http://www.carnaticmusic.esmartmusic.com/srikanakadasa/kanakacomp.htm)
(ಕನಕದಾಸರ ಇನ್ನಷ್ಟು ರಚನೆಗಳು ಅಂತರ್ಜಾಲದಲ್ಲಿ ಲಭ್ಯ: http://www.carnaticmusic.esmartmusic.com/srikanakadasa/kanakacomp.htm)
ಇದು ಕನಕ ಗೋಪುರ...ಶಿಥಿಲವಾಗಿದ್ದ ಇದನ್ನು ನವೀಕರಣ ಮಾಡುವ ಸಂದರ್ಭದಲ್ಲಿ ಕೆಲ ಬುದ್ದಿ ಜೀವಿಗಳು, ಸಾಮಾಜಿಕ ಸಾಮರಸ್ಯ ಕೆಡಿಸುವ ಉದ್ದೇಶದಿಂದ ಅಪಪ್ರಚಾರ ಮಾಡಿದರು. ಇಂತಹಾ ಭವ್ಯ ಕಟ್ಟೋಣ ಕನಕನಿಗೆ ಬೇರೆಲ್ಲೂ ಇಲ್ಲ!
ಕನಕ ಗೋಪುರದ ಕೆಳಗೆ ಇರುವುದೇ ಕನಕನ ಕಿಂಡಿ...ದಿನದ ಇಪ್ಪತ್ತ ನಾಲ್ಕು ತಾಸು ಭಕ್ತಾದಿಗಳು ಇದರಿಂದ ಕೃಷ್ಣ ದರ್ಶನ ಮಾಡಬಹುದು...
ದೇವಳದ ಒಳ ಸುತ್ತಿನಲ್ಲಿ ಇರುವುದೇ ನವಗ್ರಹ ಕಿಂಡಿ...ಹೆಸರೇ ಹೇಳುವಂತೆ ಇದರಲ್ಲಿ ಒಂಭತ್ತು ಸಣ್ಣ ಕಿಂಡಿಗಳು ಇವೆ.
ಇದು ಅಜ್ಞಾನ ಪ್ರದರ್ಶನವಲ್ಲದೆ ಮತ್ತೇನು?

==========================

ತಾವು ಅಧಿಕಾರದಲ್ಲಿ ಇದ್ದಾಗ ಬರಿ ಜಾತಿ ರಾಜಕಾರಣ ನಡೆಸಿ, ಈಗ ಬಿ ಜೆ ಪಿ ಸರ್ಕಾರ ಕನಕ ಜಯಂತಿ, ಕನಕ ಅಧ್ಯಯನ ಪೀಠ , ಕನಕ ಪ್ರಶಸ್ತಿ ಇತ್ಯಾದಿಗಳನ್ನು ಘೋಷಿಸಿ...ಅದ್ದೂರಿಯಾಗಿ ನಡೆಸುತ್ತಿರುವಾಗ ಸಿದ್ರಾಮಯ್ಯನವರಿಗೆ ನಡುಕವೇ?
No comments:
Post a Comment