Wednesday, November 12, 2008

11 ನವೆಂಬರ್ ಕಾರ್ಯಕ್ರಮ: ಚಿತ್ರ-ವರದಿ..

KDP meet: for report click on the image

ಉಡುಪಿ: ನ,11. ಪ್ರಯಾಣಿಕರ ಸೌಲಭ್ಯ ಇತ್ಯಾದಿಗಳನ್ನು ಲಕ್ಷ್ಯದಲ್ಲಿರಿಸಿಕೊಂಡು ಖಾಸಗಿ ಬಸ್‌ನೊಂದಿಗೆ ಸರಕಾರಿ ಬಸ್ ಅಳವಡಿಸಿಕೊಳ್ಳಲು ಇಂದಿಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹಮಂತ್ರಿ ಡಾ. ವಿ. ಎಸ್. ಆಚಾರ್ಯ ಹೇಳಿದರು.
ಮ೦ಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ತರುವಾಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಖಾಸಗಿ ಬಸ್‌ಗಳು ನೀಡುವ ಸೇವೆಯನ್ನು ಸರಕಾರಿ ಬಸ್‌ಗಳು ನೀಡುವಂತಿಲ್ಲ. ಸರಕಾರಿ ಬಸ್ ಹಾಕದಂತೆ ಖಾಸಗಿ ಬಸ್ ಮಾಲೀಕರು ಲಾಬಿ ಮಾಡುತ್ತಿದ್ದಾರೆ ಎಂಬುದು ಸರಿಯಲ್ಲ. ಪ್ರಯಾಣಿಕರಿಗೆ ಅನುಕೂಲತೆ ಕಲ್ಪಿಸುವುದೇ ಸರಕಾರದ ಉದ್ದೇಶ. ಹಾಗಾಗಿ ಖಾಸಗಿ ಬಸ್‌ಗಳನ್ನು ಸ್ಥಗಿತಗೊಳಿಸದೇ ಸರಕಾರಿ ಬಸ್‌ಗಳನ್ನು ಹಾಕಲಾಗುವುದು ಎಂದರು.
ಜಿಲ್ಲೆಯ ಹದಗೆಟ್ಟ ರಸ್ತೆಗಳ ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಹಣದ ಕೊರತೆ ಇಲ್ಲ. ಹೆದ್ದಾರಿ, ಗ್ರಾಮೀಣ ರಸ್ತೆಗಳು ಹಾಗೂ ಜಿ. ಪಂ. ರಸ್ತೆಗಳ ದುರಸ್ತಿಗಾಗಿ ಈಗಾಗಲೇ 10 ಕೋಟಿ ರೂ. ಬಿಡುಗಡೆಯಾಗಿದೆ. ಇನ್ನೂ 14 ಕೋಟಿ ಶೀಘ್ರ ಬಿಡುಗಡೆಯಾಗಲಿದೆ. 10 ಕೋಟಿ ರೂ. ಪೈಕಿ ಕಾಮಗಾರಿಗಾಗಿ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದ್ದು, ಉಳಿದ ಕಾಮಗಾರಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಹೊಂಡ ಮುಚ್ಚುವ ಹಾಗೂ ತೇಪೆ ಕಾರ್ಯ ಈಗಾಗಲೇ ಆರಂಭವಾಗಿದೆ. ದುರಸ್ತಿ ಕಾರ್ಯ ಡಿಸೆ೦ಬರ್ 15ರಿಂದ ಜ. 15ರೊಳಗೆ ಪೂರ್ಣವಾಗಲಿದೆ ಎಂದರು. ಲೋಕೋಪಯೋಗಿ ರಸ್ತೆಗಳ ದುರಸ್ತಿ ಕುರಿತು ತಾಂತ್ರಿಕ ಅಡಚಣೆ ಇದ್ದು ಅದನ್ನು ಬಗೆಹರಿಸಲಾಗುವುದು ಎಂದರು.
ವಿದ್ಯುಚ್ಛಕ್ತಿ ಅಭಾವ ಸಮಸ್ಯೆ ನಿವಾರಣೆಗೆ ಈಗಾಗಲೇ ಸರಕಾರ ಕ್ರಮ ಕೈಗೊಂಡಿದ್ದು, ಈ ತಿಂಗಳ 16 ರಿಂದ ತಣ್ಣೀರುಬಾವಿ ಬಾರ್ಜ್ ಮೌಂಟೆಡ್ ಸ್ಥಾವರದ ವಿದ್ಯುತ್ ರಾಜ್ಯಕ್ಕೆ ಲಭ್ಯವಾಗಲಿದೆ. ಈಗಾಗಲೇ ಮಾಡಿಕೊಂಡಿರುವ ಒಪ್ಪಂದದ ಹಿನ್ನೆಲೆಯಲ್ಲಿ ಇದುವರೆಗೆ ರಾಜಸ್ಥಾನಕ್ಕೆ ವಿದ್ಯುತ್ ಕಳಿಸಲಾಗುತ್ತಿದ್ದರೂ ನ.16 ರ ಬಳಿಕ ಕರ್ನಾಟಕಕ್ಕೆ ಲಭಿಸಲಿದೆ. ಕೊಂಚ ದುಬಾರಿಯಾದರೂ ಅದು ಗ್ರಾಹಕರಿಗೆ ಹೊರೆಯಾಗದು ಎಂದರು. ಜೊತೆಗೆ ವಾರಾಹಿ ವಿದ್ಯುತ್ ಯೋಜನೆಯನ್ನು ಈ ವರ್ಷಾಂತ್ಯದೊಳಗೆ ಆರಂಭಿಸಲು ನಿರ್ಧರಿಸಲಾಗಿದ್ದು, ಅಲ್ಲಿನ ಎರಡು ಘಟಕಗಳು ವಿದ್ಯುತ್ ಉತ್ಪಾದನೆ ಮಾಡಲಿವೆ. ಇವೆಲ್ಲವೂ ಸುಸೂತ್ರವಾದಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದರು.
ಕುಡಿಯುವ ನೀರು ಸಮಸ್ಯೆ ನಿವಾರಣೆಗೂ ಹಣದ ಅಡಚಣೆ ಇಲ್ಲ. ಈಗಾಗಲೇ 14 ಕೋಟಿ ರೂ.ಗಳಷ್ಟು ಇದೆ. ಬೈಂದೂರು ಕ್ಷೇತ್ರದ ಪಡುವರಿ ಮತ್ತು ಉಡುಪಿ ಕ್ಷೇತ್ರದ ಉಪ್ಪೂರುಗಳಲ್ಲಿ ಸವುಳು ನೀರಿನ ಸಮಸ್ಯೆಯಿದ್ದು, ಆ ಸಮಸ್ಯೆ ನಿವಾರಣೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಆಚಾರ್ಯ ತಿಳಿಸಿದರು.
ಕಂದಾಯ ಇಲಾಖೆ ಸಮಸ್ಯೆ ನಿವಾರಣೆಗಾಗಿ ಈ ತಿಂಗಳ 14 ರಂದು ಬೆಂಗಳೂರಿನಲ್ಲಿ ಕಂದಾಯ ಸಚಿವರ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಉಡುಪಿ ಹಾಗೂ ದ. ಕ. ಜಿಲ್ಲಾ ಉಸ್ತುವಾರಿ ಸಚಿವರು, ಕಾನೂನು ಸಚಿವರು ಭಾಗವಹಿಸುವರು. ಕುಮ್ಕಿ, ಅಕ್ರಮ ಸಕ್ರಮ ಇತ್ಯಾದಿಗಳ ನಿವಾರಣೆಗಾಗಿ ಕ್ರಮ ಕೈಗೊಳ್ಳುವುದರ ಜೊತೆಗೆ ಇಲಾಖೆಯಲ್ಲಿನ ಭ್ರಷ್ಟಾಚಾರ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ರಘುಪತಿ ಭಟ್ ಮತ್ತು ಲಕ್ಷ್ಮೀನಾರಾಯಣ, ಜಿ. ಪಂ. ಅಧ್ಯಕ್ಷ ರಾಜು ಪೂಜಾರಿ, ಜಿಲ್ಲಾಧಿಕಾರಿ ಹೇಮಲತಾ, ಜಿ. ಪಂ. ಸಿ‌ಇ‌ಓ ಪ್ರಸನ್ನಕುಮಾರ್ ಇದ್ದರು.
ಅದಕ್ಕೂ ಮುನ್ನ ನಡೆದ ಸಭೆಯಲ್ಲಿ ಶಾಸಕರಾದ ಲಾಲಾಜಿ ಮೆಂಡನ್, ಗೋಪಾಲ ಭಂಡಾರಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಪ್ರತಾಪಚಂದ್ರ ಶೆಟ್ಟಿ ಮತ್ತು ಕೋಟ ಶ್ರೀನಿವಾಸ ಪೂಜಾರಿ, ಜಿ. ಪಂ. ಉಪಾಧ್ಯಕ್ಷೆ ಸುಜಾತಾ ವಾಸುದೇವ, ಜಿ. ಪಂ. ಸದಸ್ಯರು, ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಅಂತಾರಾಜ್ಯ ವಿಚಾರವಿನಿಮಯ:- ರಾಜ್ಯದಲ್ಲಿ ಉದ್ಭವಿಸಿದ ಸಮಸ್ಯೆಗಳ ನಿವಾರಣೆಗೆ ಕ್ಷಿಪ್ರವಾಗಿ ಸ್ಪಂದಿಸಿದ ಸರಕಾರ ಅದಕ್ಕಾಗಿ ಅಂತಾರಾಜ್ಯ ವಿಚಾರವಿನಿಮಯಗಳನ್ನೂ ಮಾಡಿಕೊಳ್ಳಲಾಗಿದೆ. ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ದೇಶನದಲ್ಲಿ ಗೃಹಸಚಿವನಾದ ತನ್ನ ನೇತೃತ್ವದಲ್ಲಿ ಕೈಗೊಂಡ ಈ ಕ್ರಮ ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಪ್ರಥಮ ಹೆಜ್ಜೆಯಾಗಿದೆ ಎಂದು ಸಚಿವ ಡಾ. ಆಚಾರ್ಯ ತಿಳಿಸಿದರು.
ರಾಜ್ಯದಲ್ಲಿನ ಅಪರಾಧ ಪ್ರಕರಣಗಳನ್ನು ತಹಬದಿಗೆ ತರುವ ಉದ್ದೇಶದಿಂದ `ಕೋಕಾ' ಕಾಯಿದೆ ಶೀಘ್ರ ಅನುಷ್ಠಾನವಾಗಿದೆ. ಅಪರಾಧ ನಿಯಂತ್ರಣವೇ ಇದರ ಉದ್ದೇಶ ಎಂದು ಹೇಳಿದರು.
ಕನಕ ಜಯಂತಿಯನ್ನು ಪ್ರಥಮ ಬಾರಿಗೆ ರಾಜ್ಯಮಟ್ಟದಲ್ಲಿ ಆಚರಿಸಲು ನಿರ್ಧರಿಸಲಾಗಿದ್ದು, ನ.15ರಂದು ಸರಕಾರಿ ರಜಾ ಘೋಷಿಸುವುದರೊಂದಿಗೆ ಉಡುಪಿ, ಬಾಡ ಹಾಗೂ ಬೆಂಗಳೂರುಗಳಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದರು (ಕನ್ನಡ ವರದಿ : ಗಲ್ಫ್ ಕನ್ನಡಿಗ)
ತುರ್ತು ಆರೋಗ್ಯ ಸೇವೆ - ಆರೋಗ್ಯ ಕವಚ
Dial 108


Filarasis control: mass distribution of tablets...

Information on Aaarogya Kavacha- Emergency Medical Services

Dr V S Acharya hands over the key to the driver of Aarogya Kavacha

Green Signal to 108

First call to 108 from Udupi

ಬರಿ ವಾಹನವಲ್ಲ , ತರಬೇತಿ ಪಡೆದ ಸಿಬಂದಿ , ಸಲಕರಣೆಗಳನ್ನು ಹೊಂದಿದ ವ್ಯವಸ್ಥೆ...

Well equipped for Life Support...with trained staff

Paramedic explains...

Official launch...
(photo courtesy: Janardan Kodavoor)
ಉಡುಪಿ:ನ,11. ಕರ್ನಾಟಕ ಸರಕಾರ ಮತ್ತು ಸಿಖಂದರಾಬಾದ್ ಇ‌ಎಂಆರ್ಐ ಜಂಟಿ ಸಹಯೋಗದಲ್ಲಿ ಈಚೆಗೆ ರಾಜ್ಯವ್ಯಾಪಿ ಚಾಲನೆಗೊಂಡ ಆರೋಗ್ಯ ಕವಚ ತುರ್ತು ಚಿಕಿತ್ಸಾ ಸೇವೆ ಇಲ್ಲಿನ ಜಿಲ್ಲಾಸ್ಪತ್ರೆಯ ಮ೦ಗಳವಾರದ೦ದು ಉದ್ಘಾಟನೆಗೊಂಡಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ. ವಿ. ಎಸ್. ಆಚಾರ್ಯರವರು ಈ ಯೋಜನೆಯನ್ನು ಉದ್ಘಾಟಿಸಿದರು.
ಈ ಯೋಜನೆ ಬಡವರಿಗೆ ಅನುಕೂಲವಾಗಲಿದೆ. ಒಟ್ಟು ಚಿಕಿತ್ಸೆಯ 95 ಶೇ.ದಷ್ಟು ಮೊತ್ತವನ್ನು ಯೋಜನೆಯಡಿ ಭರಿಸಲಾಗುತ್ತದೆ. ತುರ್ತುಚಿಕಿತ್ಸೆ ಸಂದರ್ಭದಲ್ಲಿ 108 ಸಂಖ್ಯೆಗೆ ಡಯಲ್ ಮಾಡಿದಲ್ಲಿ ಆಂಬುಲೆನ್ಸ್ ಸೇವೆ ಲಭ್ಯ. ಈಗಾಗಲೇ ಆಂಬುಲೆನ್ಸ್ ಒದಗಿಸಲಾಗಿದ್ದು, ಇನ್ನೂ ಎರಡು ಆಂಬುಲೆನ್ಸ್‌ಗಳನ್ನು ಒದಗಿಸಲಾಗುವುದು ಎಂದರು.
ಒಟ್ಟು 517ವಾಹನವು ಮು೦ಬರುವ 2010ರ ಮಾರ್ಚ ಅ೦ತ್ಯದಲ್ಲಿ ಬರಲಿದೆ. ಈಗಾಗಲೇ ಸುಮಾರು 66 ವಾಹನವನ್ನು ಈ ಸೇವೆಗೆ ಒದಗಿಸಲಾಗಿದೆ. ಅದರಲ್ಲಿ ಬೆ೦ಗಳೂರಿಗೆ 36ವಾಹನವನ್ನು ಹಾಗೂ 17 ವಾಹನವನ್ನು ರಾಜ್ಯದ ಇತರ ಕಡೆಗಳಿಗೆ ನೀಡಲಾಗಿದೆ. ಅದೇ ರೀತಿಯಲ್ಲಿ ಮು೦ಬರುವ ದಿನದಲ್ಲಿ ಮತ್ತೆರಡು ವಾಹನವು ಬರಲಿದೆ ಎ೦ದರು.
‘ನಿರಂತರ ಜ್ಯೋತಿ’ಉಡುಪಿಗೆ: ಈಗಾಗಲೇ ರಾಜ್ಯದ ಕೆಲವೆಡೆ ಆರಂಭಿಸಲಾಗಿರುವ ನಿರಂತರ ಜ್ಯೋತಿ ಯೋಜನೆ ಸದ್ಯದಲ್ಲಿಯೇ ಉಡುಪಿಯಲ್ಲೂ ಜಾರಿಯಾಗಲಿದೆ. ಈ ಯೋಜನೆಯಡಿ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ಕಲ್ಪಿಸಲಾಗುವುದು. ಕಳೆದ ಕೆಲವು ದಿನಗಳಿಂದ ಜಿಲ್ಲೆಯೂ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದೆ. 125 ಗಂಟೆಗಳಲ್ಲಿ 65 ಗಂಟೆಗಳಷ್ಟು ಕಾಲ ವಿದ್ಯುತ್ ಕೈಕೊಟ್ಟಿತ್ತು. ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದ್ದು, ಕ್ಷಿಪ್ರವಾಗಿ ಈ ಸಮಸ್ಯೆಯನ್ನು ಬಗೆಹರಿಸಲು ಹರಸಾಹಸಪಡಲಾಗುತ್ತಿದೆ. ಸ್ಥಳೀಯ ವಿದ್ಯುತ್ ಉತ್ಪಾದನೆ ಘಟಕಗಳಿಗೆ ವಿರೋಧ ಮಾಡುವುದು ಸಲ್ಲದು ಎಂದರು.
ಈ ಸಂದರ್ಭದಲ್ಲಿ ಸಚಿವ ಆಚಾರ್ಯ ರವರು ಆರೋಗ್ಯ ಕಿಟ್ ವಿತರಿಸಿದರು.
ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಹೇಮಲತಾ, ಜಿ. ಪಂ. ಸಿ‌ಇ‌ಓ ಪ್ರಸನ್ನಕುಮಾರ್, ಜಿಲ್ಲಾ ಸರ್ಜನ್ ಡಾ. ದಯಾನಂದ ನಾಯಕ್ ಮೊದಲಾದವರಿದ್ದರು.
ನ೦ದಕಿಶೋರ್ ರವರು ಸ್ವಾಗತಿಸಿದರು, ಶ್ರೀಮತಿ ಸಜನಿ ಸುಬ್ರಹ್ಮಣ್ಯರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಇದೇ ವೇದಿಕೆಯಲ್ಲಿ ಉಡುಪಿ ಜಿ.ಪ೦ಚಾಯತ್ ನ ಜಿಲ್ಲಾ ಆರೋಗ್ಯ ಮತ್ತು ಕುಟು೦ಬ ಕಲ್ಯಾಣ ಇಲಾಖೆಯ ವತಿಯಿ೦ದ ‘ಆನೆಕಾಲು ರೋಗ ನಿಯ೦ತ್ರಣದ ಔಷಧವನ್ನು ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಸಚಿವರಾದ ಡಾ.ಆಚಾರ್ಯರವರು ಚಾಲನೆ ನೀಡಿದರು.(ವರದಿ : ಗಲ್ಫ್ಕನ್ನಡಿಗ)

1 comment:

Santosh Shetgar said...

I was waiting for this post in your blog,when Arogya Kavacha launched in karnataka(almost more then a week)..

Iam not sure how the advertisement has been taken care to reach this message to all middle/lower/upper class people.

I see some posters attached in all bangalore areas and i feel which doesnt help much.Still many people might not no what is Arogya Kavacha n 108 means????


So advertisement n message has to be reach to all people which leads to success of this project.Can you please review the advertisement so that it can reach to every common men/women of karnataka.


Suggestion from my side:
1) I saw some posters which has 108 number and desc about that,it would be good if you can attach those posters outside to all BMTC buses,by that way it can reach to many people,as we have many BMTC buses in bangalore!.

2) By taking an auto campaigns to all the small,small areas just to make sure message has reached to all.

please let me know how this has been implemented.


Thanks Much..