Wednesday, November 19, 2008

ಎ ಏನ್ ಎಫ್ / ಕೆ ಎಸ್ ಆರ್ ಪಿ ಯ ಗುರುಪ್ರಸಾದ್ ವೀರ ಮರಣ...


ಇತರೆ:ಇತರ ಇತರ ಇತರ:ಇತರ:ಇತರ:ಇತರ ಇತರ, 19. ಹೊರನಾಡಿನ ಮಾವಿನ ಹೊಲ ಅರಣ್ಯ ಪ್ರದೇಶದಲ್ಲಿ ಮಂಗಳವಾರ ರಾತ್ರಿ ನಕ್ಸಲೀಯರು ಹಾಗೂ ನಕ್ಸಲ್ ನಿಗ್ರಹ ದಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ 3 ಮ೦ದಿ ನಕ್ಸಲರು ಹಾಗೂ ಓರ್ವ ಪೊಲೀಸ್ ಪೇದೆ ಸಾವನ್ನಪ್ಪಿದ ಘಟನೆ ನಡೆದಿದೆ.
ಹೊರನಾಡಿನ ಮಾವಿನಹೊಲದ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ದಳ ಹಾಗೂ ಪೊಲೀಸ್ ಪಡೆ ನಡೆಸಿದ ಜಂಟಿ ಕಾರ್ಯಾಚರಣೆ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆದಿದ್ದು, 3 ನಕ್ಸಲೀಯರು ಬಲಿಯಾಗಿದ್ದು, ನಕ್ಸಲೀಯರ ಗುಂಡಿಗೆ ಓರ್ವ ಪೊಲೀಸ್ ಪೇದೆ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಪೇದೆ ಗುರುಪ್ರಸಾದ್ ಎಂದು ಗುರುತಿಸಲಾಗಿದ್ದು, ಅವರು ಕೊಡಗು ಭಾಗಮಂಡಲದ ಕುಂದಚೇರಿ ನಿವಾಸಿಯಾಗಿದ್ದಾರೆ.
ನಕ್ಸಲೀಯರು ಹಾಗೂ ಪೊಲೀಸ್ ಪಡೆ ನಡುವೆ ನಡೆದ ಭಾರೀ ಗುಂಡಿನ ಚಕಮಕಿಯಲ್ಲಿ ಹಲವಾರು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದು, ಓರ್ವ ಮಹಿಳಾ ನಕ್ಸಲ್ ಈ ಸಂದರ್ಭದಲ್ಲಿ ಪರಾರಿಯಾಗಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ಇದೀಗ ಹೊರನಾಡಿನಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಮಾವಿನಹೊಲ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರಿಗಾಗಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ ಎಂದು ನಕ್ಸಲ್ ನಿಗ್ರಹ ಪಡೆ ಮುಲಗಳು ಹೇಳಿವೆ.
ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದ ಮೂವರು ನಕ್ಸಲೀಯರ ವಿವರ ಇನ್ನೂ ಬಹಿರಂಗವಾಗಿಲ್ಲ, ಖಚಿತ ಮಾಹಿತಿ ಮೇರೆಗೆ ಈ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಇತ್ತಂಡಗಳ ಮಧ್ಯೆ ಘರ್ಷಣೆ ಏರ್ಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ( ವರದಿ : ಗಲ್ಫ್ ಕನ್ನಡಿಗ)


ಇತರ ವರದಿ, ಚಿತ್ರ ಸಹಿತ


http://www.daijiworld.com/news/news_disp.asp?n_id=53774 (ಇವರಿಗೆ ವೀರಮರಣ ಹೊಂದಿದ ಪೊಲೀಸರ ಚಿತ್ರಕ್ಕಿಂತ, ಪೊಲೀಸರ ಮೇಲೆ ಗುಂಡು ಹಾರಿಸಿದ ನಕ್ಸಲರ ಚಿತ್ರವೇ ಹೆಚ್ಚು ಪ್ರೀತಿ!)
http://www.mangalorean.com/news.php?newstype=broadcast&broadcastid=101605

No comments: