Sunday, September 21, 2008

ಶ್ರದ್ದಾಂಜಲಿ

ಮೋಹನ್ ಚಂದ್ ಶರ್ಮ

ಸಾಧನೆ

35 ಉಗ್ರರ ಹತ್ಯೆ

80 ಉಗ್ರರ ಬಂಧನ

75 ಕ್ಕೂ ಹೆಚ್ಚು ಎನ್‌ಕೌಂಟರ್‌ಗಳಲ್ಲಿ ಭಾಗಿ

40 ರೌಡಿಗಳ ಹತ್ಯೆ 129 ರೌಡಿಗಳ ಬಂಧನ 7ಶೌರ್ಯ ಪದಕ ವಿಜೇತದೆಹಲಿ ಉಗ್ರರ ಕಾರ್ಯಾಚರಣೆ: ಇನ್ಸ್‌ಪೆಕ್ಟರ್ ಶರ್ಮ ವೀರಮರಣ-ದೆಹಲಿ ಪೊಲೀಸ್‌ನ ಎನ್‌ಕೌಂಟರ್ ಸ್ಪೆಷಲಿಸ್ಟ್ ಗುಂಡಿಗೆ ಬಲಿ -ಸಾಯುವಾಗಲೂ ಉಗ್ರರ ವಿರುದ್ಧ ಪುರಾವೆ ನೀಡಿದ ಅಧಿಕಾರಿ
ನವದೆಹಲಿ: 35 ಉಗ್ರರನ್ನು ಹೊಡೆದುರುಳಿಸಿ ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿದ್ದ ದೆಹಲಿಯ ವಿಶೇಷ ಪೊಲೀಸ್ ಘಟಕದ ಧೀರ ಇನ್ಸ್ ಪೆಕ್ಟರ್ ಮೋಹನಚಂದ್ ಶರ್ಮಾ, ಶುಕ್ರವಾರ ಇಲ್ಲಿನ ಜಾಮಿಯಾ ನಗರದಲ್ಲಿ ನಡೆದ ಕಾರ್ಯಾಚರಣೆ ವೇಳೆ ಉಗ್ರರ ಗುಂಡಿಗೆ ಎದೆಯೊಡ್ಡಿ ವೀರಮರಣ ಹೊಂದಿದ್ದಾರೆ.
ತಮ್ಮ ವೃತ್ತಿಜೀವನದಲ್ಲಿ 35 ಉಗ್ರರನ್ನು ಹೊಡೆದುರುಳಿಸಿದ್ದ, 80ಕ್ಕೂ ಹೆಚ್ಚು ಉಗ್ರರನ್ನು ಹೆಡೆಮುರಿ ಕಟ್ಟಿದ್ದ ಹಾಗೂ 75 ಕ್ಕೂ ಹೆಚ್ಚು ಪೊಲೀಸ್ ಕಾರ್ಯಾಚರಣೆ ಗಳಲ್ಲಿ ಪಾಲ್ಗೊಂಡ ಕೀರ್ತಿ ಅವರದು. ಇದಲ್ಲದೆ, 40 ಅಂತಾರಾಜ್ಯ ರೌಡಿಗಳನ್ನು ಗುಂಡಿಟ್ಟು ಕೊಂದಿದ್ದೇ ಅಲ್ಲದೆ, ಇನ್ನೂ129 ರೌಡಿಗಳನ್ನು ಬಂಧಿಸಿದ್ದು ಶರ್ಮಾ ಸಾಧನೆ.
ಸ್ಥಳೀಯರ ಪ್ರತಿಭಟನೆ ವಿಪರ್ಯಾಸ:
ಅತ್ತ ಜಾಮಿಯಾ ನಗರದಲ್ಲಿ ‘ಪೊಲೀಸರು ಏಕಪಕ್ಷೀಯವಾಗಿ ದಾಳಿ ನಡೆಸಿದ್ದಾರೆ. ಪೊಲೀಸರ ಮೇಲೆ ಯಾರೂ ಗುಂಡು ಹಾರಿಸಲಿಲ್ಲ. ಸತ್ತವರು ಅಮಾಯಕರು’ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಆದರೆ, ಇತ್ತ ಇನ್ಸ್ ಪೆಕ್ಟರ್ ಶರ್ಮಾ ಅವರು ಉಗ್ರರಿಂದಲೇ ಗುಂಡಿನ ಸುರಿಮಳೆಗೆ ಎದೆಯೊಡ್ಡಿ ಆಸ್ಪತ್ರೆಗೆ ದಾಖಲಾದದ್ದು ವಿಪರ್ಯಾಸವೇ ಸರಿ. ಗಾಯದ ತೀವ್ರತೆಯಿಂದಾಗಿ ಕೊನೆಯುಸಿರೆಳೆದಾಗಲೂ ನಿಷ್ಠಾವಂತ ಅಧಿಕಾರಿ ಶರ್ಮಾ ಅವರು ಜಾಮಿಯಾನಗರದ ಸ್ಥಳೀಯರ ಆರೋಪ ಹುಸಿಯೆಂದು ಸಾಬೀತುಗೊಳಿಸಿದರು!

ಇವರು ಶ್ರೀಮತಿ ಮಾಯಾ ಶರ್ಮ. (ಇವರ ಪತಿ ವೀರ ಉಗ್ರರೊಂದಿಗೆ ಹೋರಾಡಿ ಮರಣ ಹೊಂದಿದವರು)ಇವರನ್ನು ಸಂತೈಸಲು ನಮ್ಮ ಬುದ್ಧಿ ಜೀವಿಗಳು (ತೀಸ್ತ ಸೇತಲ್ವಾದ್ ರಂತಹ / ಮಹೇಶ ಭಟ್ಟರು ), ಮಾನವ ಹಕ್ಕುಗಳ ಪ್ರತಿಪಾದಕರು ಯಾರಾದರೂ ಬರುತ್ತಾರೆಯೇ...ಇಲ್ಲ...ಅದರ ಬದಲು ಸಾಯಿಸಲ್ಪಟ್ಟ ಉಗ್ರಗಾಮಿಗಳ ಮೇಲೆ "ಪೋಲಿಸ್ ದೌರ್ಜನ್ಯ" ಎಂದು ದೆಹಲಿ ಪೊಲೀಸರ ಮೇಲೆ ಗೂಬೆ ಕೂರಿಸುತ್ತಾರೆಯೇ?

3 comments:

Rajkiran Panuganti said...

We should salute to him and esp. to his family.

Sunil said...

(aangladalli bareyuttiruvudakke kshamisi.)
Heard that he was not wearing bullet proof jacket even though his boss suggested him! What could have been the reason for not wearing it? Also hearing some news that police department must make it mandatory for the people to wear bullet-proof jacket who involve in such risky jobs.
Salute to brave hero, Inspector MCSharma for sacrifying his life too to save our lives.

Ravi said...

we are safe just because there are sincere brave policemen.
I read in a newspaper that the K'taka Govt has sanctioned 10Lakhs. However money cant replace a brave policeman, a great husband. I feel proud of this decision by the Govt to support him rather than bragging the taxpayers money into the crickers who are paid nevertheless by the corporates in the form of Advt...