ಬಿಲ್ಲಾಡಿ, ಡಿ.೨೦: ರಾಜ್ಯದ ಬಿಜೆಪಿ ಸರಕಾರ ರೂಪಿಸಿರುವ ವಿವಿಧ ಕಾರ್ಯ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಜನಸ್ಪಂದನ ಕಾರ್ಯಕ್ರಮಕ್ಕೆ ಜನರ ಸ್ಪಂದನ ಅತ್ಯಗತ್ಯ ಎಂದು ರಾಜ್ಯ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್. ಆಚಾರ್ಯ ಅವರು ಹೇಳಿದ್ದಾರೆ.
ಉಡುಪಿ ತಾಲೂಕು ಕೋಟ ಹೋಬಳಿಯ ಬಿಲ್ಲಾಡಿ ಪ್ರೌಢ ಶಾಲಾ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಜನಸ್ಪಂದನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಜನಸ್ಪಂದನ ಕಾರ್ಯಕ್ರಮದಲ್ಲಿ ರಸ್ತೆ, ನೀರು ಸಹಿತ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಡಾ. ಆಚಾರ್ಯ ಹೇಳಿದರು. ೬೫ ವರ್ಷ ವಯೋವೃದ್ಧರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ೨೫೫ ಮಂದಿಗೆ ಹಾಗೂ ವಿಧವಾ ವೇತನ ಭಾಗ್ಯಲಕ್ಷ್ಮಿ ಯೋಜನೆಯ ಪ್ರಮಾಣ ಪತ್ರ ಮತ್ತು ಬಡವರ್ಗದ ರೈತರಿಗೆ ಒಂದು ಸಾವಿರ ರೂ.ಗಳ ಚೆಕ್‌ಗಳನ್ನು ಸಚಿವರು ಫಲಾನುಭವಿಗಳಿಗೆ ವಿತರಿಸಿದರು.
ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಕೆ. ಮುರಳೀಧರ್ ಸ್ವಾಗತಿಸಿದರು
1 comment:
Dr.Minister it would be better if the Bhagyalaxmi scheme is modified to Ladli Laxmi of Madhya pradesh
Under the scheme, the state government buys saving certificates of Rs.6,000 each year for five consecutive years for every girl born in a family.
The girl gets Rs.2,000 after she completes the Class 5, another Rs.4,000 after she completes the Class 8, Rs.7,500 after she completes the Class 10, Rs. 200 per month in her 11th standard and a lumpsum amount of Rs.1,18,000 after she enters the 12th standard or, alternatively, attains the age of 18.
Post a Comment