Thursday, December 25, 2008

ಕುಂಬಳ ಕಾಯಿ ಕಳ್ಳನಂತೆ ಹೆಗಲು ಮುಟ್ಟಿ ನೋಡಿಕೊಂಡ ಟಿ ವಿ ಚಾನಲ್!

???

ಇಡಿಯ ರಾಜ್ಯದ ಜನತೆಯನ್ನು "ಬಕ್ರಾ" ಮಾಡಿದ ಖಾಸಗಿ ಸುದ್ದಿ ಚಾನಲ್ ಒಂದು ತಾನು ಮಾಡಿದ ತಪ್ಪಿನ ಅರಿವಾಗಿ ಈಗ ತನ್ನ ಕುಕೃತ್ಯ ಮುಚ್ಚಿ ಹಾಕಲು, ಗೃಹ ಸಚಿವರನ್ನು ಲೇವಡಿ ಮಾಡಲು ಹೊರಟಿದೆ! ಗೃಹ ಸಚಿವರು ಯಾರ ಹೆಸರು ಹೇಳದಿದ್ದರೂ ತಾನೆ ಹೆಗಲು ಮುಟ್ಟಿ ನೋಡಿಕೊಂಡಿದೆ! ಅಷ್ಟಕ್ಕೂ ಈ ಸುದ್ದಿ ಚಾನಲ್ ಅನ್ನು ನಂಬುತ್ತಾರೆ ಯಾರು?
ಪಲ್ಸ್ ಪೋಲಿಯೋ ಟಿವಿ ಅವಾಂತರ:ನಡು ರಾತ್ರಿಯಲ್ಲಿ ಮುಗ್ಧ ಕಂದಮ್ಮಗಳ ಜೀವ ಹಿಂಡಿದ ಟಿವಿ ಚಾನಲ್ ಬೆಂಬಲಕ್ಕೆ "ಕನ್ನಡಪ್ರಭ"?
ಒಂದು ಕಾಲದಲ್ಲಿ ಖಾದ್ರಿ ಶಾಮಣ್ಣನಂತಹವರ ಸಾರಥ್ಯದಲ್ಲಿ ಮೆರೆದಿದ್ದ "ಕನ್ನಡಪ್ರಭ" ದಿನಪತ್ರಿಕೆಯ ಇಂದಿನ ಪರಿಸ್ಠಿತಿ ಕಂಡು ಕರುಣೆ ಪಡಬೇಕಾಗಿದೆ.
ಯಾವುದೋ ವಿದೇಶೀ ಔಷದಿ ಕಂಪೆನಿಯ ಚಿತಾವಣೆಯಿಂದ ಸುಳ್ಳು ಸುದ್ದಿ ಪ್ರಸಾರ ಮಾಡಿ ನಡು ರಾತ್ರಿಯಲ್ಲಿ ಮುಗ್ಧ ಕಂದಮ್ಮಗಳನ್ನು, ಹೆತ್ತವರನ್ನು ಬೀದಿಗಿಳಿಸಿದ ಟಿವಿ ಚಾನೆಲ್ ಬೆಂಬಲಕ್ಕಿಂದು "ಕನ್ನಡ ಪ್ರಭ" ನಿಂತಿದೆ.
ಪತ್ರಿಕಾಗೋಷ್ಠಿಯಲ್ಲಿ ಪಲ್ಸ್ ಪೋಲಿಯೋದ ಬಗ್ಗೆ ಸತ್ಯವನ್ನು ಹೇಳಿ ಜನರಲ್ಲಿ ಧೈರ್ಯ ತುಂಬಿಸಿದ ತಪ್ಪಿಗಾಗಿ ಸ್ವತಃ ವೈದ್ಯರಾದ ಗೃಹ ಸಚಿವರೇ ಇಂದಿನ "ಕನ್ನಡಪ್ರಭ"ದ ಕಾರ್ಟೂನ್!
ಹಣದ ಆಸೆಗಾಗಿ ಸುಳ್ಳು ಸುದ್ದಿ ಪ್ರಸಾರ ಮಾಡಿ ನಡು ರಾತ್ರಿಯಲ್ಲಿ ಯಾವುದೇ ತಪ್ಪು ಮಾಡದ ಕಂದಮ್ಮಗಳ ಜೀವ ಹಿಂಡಿ, ಈಗ "ಪತ್ರಿಕಾ ಸ್ವಾತಂತ್ರ್ಯ"ದ ಹೆಸರಲ್ಲಿ ತಮ್ಮ ಹೀನ ಕೃತ್ಯಗಳನ್ನು ಸಮರ್ಥನೆ ಮಾಡುವ ಮಾಧ್ಯಮಗಳ ಬಗ್ಗೇನು ಹೇಳೋಣ?

6 comments:

Sridhar said...

Respected Sir,
The TV9 channel is trying to defend itself by saying that it never said, that a death has occured due to the vaccination. May be true, but at the same time it has to own the responsibility for creating panic among the parents of those infants who were vaccinated.
This channel along with some english channels have no common sense, for they have openly telecast our security lapses. Dont they understand that it reaches the terrorists? Instead, had they handedover the video tapes to the concerned security dept. they would have been appreciated for their national concern.
Sir, your position is not a bed of roses but of thorns, please do not worry & continue your good work.
Do not forget there are always - 'barking dogs' around us.

SHREE (ಶ್ರೀ) said...

ಗೃಹ ಸಚಿವರಾಗಿ ನಿಮ್ಮ ಹೆಸರಿನಲ್ಲಿ ಇಂತಹ ಕೆಳಮಟ್ಟದ ರಾಜಕೀಯಕ್ಕೆ ಉತ್ತರಕೊಡುವ ಪ್ರಕಟಣೆಗಳು ಬರಬಾರದು. ಕನ್ನಡಪ್ರಭದಲ್ಲಿ ಬಂದಿದ್ದು ಒಂದು ವ್ಯಂಗ್ಯಚಿತ್ರ, ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳುತ್ತೀರಲ್ಲಾ ಸರ್, ಏನು ಹೇಳೋಣ ನಿಮಗೆ...? ಅಷ್ಟಕ್ಕೂ ಆರೋಗ್ಯ ಸಚಿವರು ಪಲ್ಸ್ ಪೋಲಿಯೋ ಬಗ್ಗೆ ಹಿಂದಿನ ದಿನ ಔಪಚಾರಿಕವಾಗಿಯಾದರೂ ಏನೂ ಮಾಹಿತಿ ನೀಡದಿದ್ದಿದ್ದು ನಿಜ ತಾನೇ, ಅವರನ್ನು ಯಾಕೆ ಸಮರ್ಥಿಸಿಕೊಳ್ಳುತ್ತೀರಿ?

ಕ್ರೆಡಿಟ್ ಕಾರ್ಡ್ ದುರುಪಯೋಗ ಪ್ರಕರಣದಲ್ಲಿ ದೂರು ಕೊಡಲೆಂದು ಹೋದಾಗ ಬೆಂಗಳೂರಿನ ಪೊಲೀಸ್ ಸ್ಟೇಶನ್ ಒಂದರ ಪರಿಸ್ಥಿತಿ ನನ್ನ ಕಣ್ಣಾರೆ ನೋಡಿ ಬೇಸರವಾಯಿತು... ಆಗಿ ಹೋದ ವಿಚಾರವನ್ನು ಚ್ಯೂಯಿಂಗ್ ಗಮ್ ಥರ ಎಳೆದು ನಿಮ್ಮ ಮನಶ್ಶಾಂತಿ ನೀವೇ ಹಾಳು ಮಾಡಿಕೊಳ್ಳುವ ಬದಲು, ನಿಮ್ಮ ಇಲಾಖೆಯ ಬಗ್ಗೆ ಹೆಚ್ಚು ಗಮನ ಕೊಟ್ಟು, ನಿಮ್ಮ ಪೊಲೀಸ್ ಸ್ಟೇಶನ್-ಗಳು ಎಂಥಾ ಪರಿಸ್ಥಿತಿಯಲ್ಲಿವೆ ಅಂತ ಸರ್ವೇ ಮಾಡಿಸಿ, ಅವುಗಳ ಉದ್ಧಾರ ಮಾಡಿಸಿದರೆ ನಿಮಗೆ ನಿಜಕ್ಕೂ ಒಳ್ಳೆ ಹೆಸರು ಬರುತ್ತದೆ...

Sharath Kumar said...

ಮಾನ್ಯ "ಶ್ರೀ"ಯವರೆ,

ಬೇರೇನೇ ವಿಷಯವಿರಲಿ (ಆರೋಗ್ಯ ಸಚಿವರು ಹೇಳಿಕೆ ಕೊಡದಿರುವುದು, ಟಿವಿ ಚಾನೆಲ್ ಗಳು ಒಬ್ಬರಿಗೊಬ್ಬರು ಕೈ ತೋರಿಸುತ್ತಿರುವುದು ಇತರೇ), ಸ್ವತ: ವೈದ್ಯರಾಗಿ ಪೋಲಿಯೋ ಕಾರ್ಯಕ್ರಮದ "ಎ" ಟು "ಜ಼ೆಡ್" ಗೊತ್ತಿರುವ ಆಚಾರ್ಯರ ಸ್ವಾತಿಕ ಸಿಟ್ಟು ಸಾಧುಯೆಂಬುದು ನನ್ನ ಅಭಿಪ್ರಾಯ.

ಅರ್ಧ ರಾತ್ರಿಯಲ್ಲಿ ಮಕ್ಕಳನ್ನು ಆಸ್ಪತ್ರೆಗೆ ಎಳೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಿಸಿದ ತಮ್ಮ ಮಾಧ್ಯಮ ಮಿತ್ರರ ಬೆಂಬಲಕ್ಕೆ ತಾವು ನಿಂತಿರುವುದು ವಿಷಾದನೀಯ.

ಶರತ್ ಕುಮಾರ್

SHREE (ಶ್ರೀ) said...

ನಾನು ಆಚಾರ್ಯರ ತಿಳುವಳಿಕೆ ತಪ್ಪು ಅಥವಾ ಸಿಟ್ಟು ಸಾಧುವಲ್ಲ ಅಂತ ಎಲ್ಲೂ ಹೇಳಿಲ್ಲ ಶರತ್ ಕುಮಾರ್ ಅವರೇ. ಆದರೆ ಸಾಧು ಸಿಟ್ಟುಗಳಿಗಿದು ಕಾಲವಲ್ಲ ಅಂತ ಪ್ರೂವ್ ಆಗ್ತಾ ಇದೆ, ನೀವೂ ನೋಡ್ತಾ ಇದೀರಾ ಅಲ್ವಾ. ಇನ್ನೇನು, "ತಪ್ಪು ತಿಳುವಳಿಕೆಯಿಂದ" ಆಚಾರ್ಯರ ಇಲಾಖೆ ಹಾಕಿದ ಎಲ್ಲಾ ಕೇಸು ಈಗ ವಾಪಸಾಗ್ತಿದೆ. ಸುಮ್ನೆ ಕೆಸರು ಎರಚಾಟದಲ್ಲಿ ಸಿಕ್ಕಿ ಹಾಕಿಕೊಳ್ಳುವ ಬದಲು ಅವ್ರವ್ರ ಕೆಲ್ಸ ನೋಡ್ಕೊಳೋದು, ತಮ್ಮ ಕರ್ತವ್ಯದಲ್ಲಿ ಎಲ್ಲೂ ಲೋಪದೋಷ ಸಿಗೋ ಥರಾ ಮಾಡ್ದೇ ಇರೋದು ಬೆಟರ್ರು ಅಂದೆ ಅಷ್ಟೆ.

prabhath said...

Respected Sir
It is very sad to inform you that decision taken by Chief Minister to withdraw the cases filed against tv9.
I was very sad and demotivating one.

Anonymous said...

Sir, we have been watching how some channels are trying to be in limelight by galvanising rusted ruts. TV9 is no exception. Just because they are presenting their programmes in a different way doesnot mean they present TRUTH always.. Many a times they have broadcasted certain news in a arrogant..irresponsible manner. Padmapriya incidence is one for example..It is the prematchured leakage of her wheareabouts in TV9 compelled her to surrender to emotional blackmail and drove her to commit suicide. As a responsible citizen of this state i hold TV( responsible for Padmapriya's suicide and for the chaos caused due to misinformed news about pulsepolio. Those in the name of press freedom supporting TV9 are doing a disservice to the state and the country.