Friday, August 15, 2008

Udupi: Koti – Chennayya Theme Park to be Set Up at Karkala – Minister Dr Acharya



ಪ್ರಗತಿ ಪಥದಲ್ಲಿ ಮುಂಚೂಣಿ ಸ್ಥಾನದ ಸಂಕಲ್ಪ: ಸಚಿವ ಆಚಾರ್ಯ

ಉಡುಪಿ:ಅಗಸ್ಟ್,15 ರಾಷ್ಟ್ರ ಅಭಿವೃದ್ಧಿ ಭೂಪಟದಲ್ಲಿ ಪ್ರಗತಿಪರ ಕರ್ನಾಟಕ ಪ್ರಸ್ತುತ 7ನೇ ಸ್ಥಾನದಲ್ಲಿದೆ. ರಾಜ್ಯವನ್ನು ಪಥದಲ್ಲಿ ರಾಜ್ಯವನ್ನು ಮುಂಚೂಣಿ ಸ್ಥಾನಕ್ಕೆ ತಂದು ನಿಲ್ಲಿಸುವುದು ತಮ್ಮ ಸರಕಾರದ ಸಂಕಲ್ಪ ಎಂದು ರಾಜ್ಯ ಗೃಹಮಂತ್ರಿಯೂ ಆಗಿರುವ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ವಿ. ಎಸ್. ಆಚಾರ್ಯ ಹೇಳಿದರು.ಇಲ್ಲಿನ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರದ೦ದು ದೇಶದ 62ನೇ ಸ್ವಾತಂತ್ರ್ಯೋತ್ಸವದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.ಜನರ ಭಾವನೆಗಳನ್ನು ಗೌರವಿಸಿ, ಅವರ ನ್ಯಾಯೋಚಿತ ಆಶಯ ಮತ್ತು ಅಗತ್ಯಗಳಿಗೆ ಸ್ಪಂದಿಸುವ ನಿಲುವು ತಳೆಯಲಾಗಿದೆ. ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದ ನಾಗರಿಕರಿಗೆ ಉತ್ತಮ ಗುಣಮಟ್ಟದ ಜೀವನ ನಡೆಸಲು ಕಾರ್ಯಕ್ರಮ ರೂಪಿಸಲು ಸರಕಾರ ಬದ್ಧವಾಗಿದೆ. ರಾಜ್ಯದ ಎಲ್ಲಾ ಪ್ರದೇಶಗಳ ಸಮಾನ ಅಭಿವೃದ್ಧಿಗೆ ಗಮನಹರಿಸಿ ಎಲ್ಲಾ ಜಾತಿ, ಸಮುದಾಯ ಮತ್ತು ದುರ್ಬಲ ವರ್ಗಗಳಿಗೆ ಸೇರಿದ ಜನರ ಬದುಕನ್ನು ಹಸನುಗೊಳಿಸಲು ಸರಕಾರ ಸನ್ನದ್ಧವಾಗಿದೆ. ಆರ್ಥಿಕ ಅಭಿವೃದ್ಧಿ ಜೊತೆಗೆ ಸಾಮಾಜಿಕ ಅಭಿವೃದ್ಧಿಯನ್ನು ಸಮನ್ವಯಗೊಳಿಸಿ ಸಮಸ್ತರ ಕಲ್ಯಾಣ ಸಾಧಿಸಲಾಗುವುದು. ನೂತನ ಯೋಜನೆಗಳಿಗೆ ಚಾಲನೆ ನೀಡಿ ಅವುಗಳನ್ನು ಅನುಷ್ಠಾನಗೊಳಿಸುವ ಮುಖೇನ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿಸುವುದು ಸರಕಾರದ ಕನಸು ಎಂದು ಸಚಿವ ಆಚಾರ್ಯ ನುಡಿದರು. ಕೃಷಿರಂಗ ಬಲವರ್ಧನೆ:- ರೈತರ ಹೆಸರಿನಲ್ಲಿ ಪ್ರಮಾಣವಚನ ಪಡೆದ ಮುಖ್ಯಮಂತ್ರಿ ಯಡಿಯೂರಪ್ಪ ಕೃಷಿರಂಗವನ್ನು ಬಲಪಡಿಸುವ ಉದ್ದೇಶದಿಂದ ಆ. 1 ರಿಂದ 10 ಎಚ್‌ಪಿ ವರೆಗಿನ 15 ಲಕ್ಷ ಕೃಷಿ ಪಂಪುಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಉದ್ದೇಶದಿಂದ 2,050 ಕೋಟಿ ರೂ. ಸಹಾಯಧನ ಒದಗಿಸಲಾಗಿದೆ. ಮೊತ್ತಮೊದಲ ಬಾರಿಗೆ ಶುಷ್ಕಭೂಮಿ ಕೃಷಿಕರಿಗೆ ಮಳೆ ವೈಫಲ್ಯದ ಹಿನ್ನೆಲೆಯಲ್ಲಿ ಬಿತ್ತನೆ ಬೀಜ, ಗೊಬ್ಬರ ಇತ್ಯಾದಿ ಖರೀದಿಗಾಗಿ ತಲಾ ಒಂದು ಸಾವಿರ ರೂ.ಗಳಂತೆ ರೈತರ ಖಾತೆಗೆ ಜಮಾ ಮಾಡುವ ಉದ್ದೇಶದಿಂದ 500 ಕೋಟಿ ರೂ.ಗಳನ್ನು ಮೀಸಲಿರಿಸ ಲಾಗಿದೆ. ಹಾಲು ಉತ್ಪಾದಕರಿಗೆ ಸಹಾಯಧನ, ಮೀನುಗಾರರಿಗೆ ಸಾಲ ಸೌಲಭ್ಯ, ಕೃಷಿ ಆವರ್ತನಿಧಿ ಹೆಚ್ಚಳ, ಸಮಗ್ರ ಕೃಷಿ ಅಭಿವೃದ್ಧಿಗೆ ಕೃಷಿ ಮಿಷನ್ ಸ್ಥಾಪನೆ ಮೊದಲಾದ ಯೋಜನೆಗಳನ್ನು ರೂಪಿಸಲುದ್ದೇಶಿಸಲಾಗಿದೆ. ಆರೋಗ್ಯ-ಶಿಕ್ಷಣ:- ಖಾಸಗಿ ಸಹಭಾಗಿತ್ವದಲ್ಲಿ ಬಡವರ ಚಿಕಿತ್ಸಾ ಕಾರ್ಯಕ್ರಮಗಳಿಗಾಗಿ ಆರೋಗ್ಯ ಕವಚ, ಹೆರಿಗೆ ಸೌಲಭ್ಯಕ್ಕಾಗಿ ತಾಯಿಭಾಗ್ಯ ಯೋಜನೆ ಅನುಷ್ಠಾನಗೊಳಿ ಸಲಾಗಿದೆ. ಪ್ರಸ್ತುತ ವರ್ಷದಿಂದ ಸರ್ವ ಶಿಕ್ಷಣ ಅಭಿಯಾನಕ್ಕೆ ಸರಕಾರ ೯೫೮ ಕೋಟಿ ರೂ. ಖರ್ಚು ಮಾಡಲು ನಿರ್ಧರಿಸಿದೆ. ೯ ತಾಲ್ಲೂಕುಗಳಲ್ಲಿ ೧೭ ಕೋಟಿ ರೂ. ವೆಚ್ಚದಲ್ಲಿ ಹೊಸ ಐಟಿ‌ಐ ಸಂಸ್ಥೆಗಳನ್ನು ಸ್ಥಾಪಿಸಲುದ್ದೇಶಿಸಲಾಗಿದೆ. ಉನ್ನತ ಶಿಕ್ಷಣದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಉನ್ನತ ಶಿಕ್ಷಣ ಆಯೋಗ ರಚಿಸಲಾಗುವುದು. ಮುಂದಿನ ೫ ವರ್ಷಗಳಲ್ಲಿ ೧೦ ಲಕ್ಷ ಉದ್ಯೋಗ ಸೃಷ್ಟಿಗಾಗಿ ಕೌಶಲ್ಯ ಆಯೋಗ ಸ್ಥಾಪನೆ ಸರಕಾರದ ಉದ್ದೇಶ ಎಂದರು. ಬಜೆಟ್‌ನಲ್ಲಿ ಪ್ರಸ್ತಾಪಿಸಿದಂತೆ ಮೂಲ ಸೌಕರ್ಯಭಿವೃದ್ಧಿಗೆ ೨೦೦ ಕೋಟಿ, ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಕ್ರಮ, ಎಲ್ಲಾ ಜಿಲ್ಲೆಗಳಿಗೂ ವಾಯುಯಾನ ಸೌಕರ್‍ಯ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರು ಯೋಜನೆ ಇತ್ಯಾದಿಗಳನ್ನು ಅನುಷ್ಠಾನಗೊಳಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಶುದ್ಧ ನೀರಿಗೆ ನಂಜುರಹಿತ ಘಟಕ:- ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಈಗಾಗಲೇ ನೀಲನಕಾಶೆ ಸಿದ್ಧಪಡಿಸಲಾಗಿದೆ. ಉದ್ದೇಶಿತ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ದ. ಕ., ಉಡುಪಿ ಹಾಗೂ ಉ. ಕ. ಜಿಲ್ಲೆಗಳ ಪ್ರಗತಿಗೆ ಪೂರಕವಾಗಲಿದೆ. ಕಾರ್ಕಳದಲ್ಲಿ ಕೋಟಿ ಚೆನ್ನಯ ಥೀಮ್ ಪಾರ್ಕ್ ನಿರ್ಮಾಣ ಕಾರ್ಯ ಸದ್ಯದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು. ಉಡುಪಿಯಲ್ಲಿ ಕನಕದಾಸ ಅಧ್ಯಯನ ಕೇಂದ್ರ ಮತ್ತು ಯಕ್ಷಗಾನ ಅಧ್ಯಯನ ಕೇಂದ್ರ ಸ್ಥಾಪನೆ, ರಾಷ್ಟ್ರೀಯ ಹೆದ್ದಾರಿ ೧೭ಕ್ಕೆ ಪರ್ಯಾಯವಾಗಿ ಪೂರ್ವದಲ್ಲಿ ಇನ್ನೊಂದು ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಸೌಭಾಗ್ಯ ಸಂಜೀವಿನಿ ವಿಸ್ತ್ರೃತ ಯೋಜನೆ ವರದಿ ತಯಾರಿಗೆ ಆದೇಶ ನೀಡಲಾಗಿದ್ದು, ಆವಶ್ಯಕ ಅನುದಾನ ನೀಡಲಾಗಿದೆ. 22 ಕೋಟಿ ರೂ. ವೆಚ್ಚದಲ್ಲಿ ಉಡುಪಿ ಜಿಲ್ಲಾಡಳಿತ ಸಜ್ಜಾಗುತ್ತಿದೆ. ಜಿಲ್ಲಾ ವಲಯ ಕಾರ್ಯ ಕ್ರಮದಡಿ ಕಳೆದ ವರ್ಷದ ಯೋಜನಾ ಮೊತ್ತಕ್ಕಿಂತ ೨೦ ಕೋಟಿ ಹೆಚ್ಚುವರಿ ಹಣ ನಿಗದಿ ಮಾಡಲಾಗಿದೆ. ಜಿಲ್ಲೆಯ ೮೦೯ ಗ್ರಾಮಗಳಿಗೆ ೧೩.೬೬ ಕೋಟಿ ರೂ. ವೆಚ್ಚದಲ್ಲಿ ಶುದ್ಧ ಕುಡಿ ಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ನೀರಿನ ಗುಣಮಟ್ಟ ಸುಧಾರಿಸಲು ನಂಜುರಹಿತ ಘಟಕಗಳನ್ನು ಸ್ಥಾಪಿಸಲಾಗಿದೆ. ನಿಟ್ಟೆ ಮತ್ತು ಹೆಬ್ರಿ ಗ್ರಾಮಗಳಲ್ಲಿ ೭.೫ ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನ ಗೊಳಿಸಲುದ್ದೇಶಿಸಲಾಗಿದೆ. ನಕ್ಸಲಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಕ್ರಮ, ವಿದ್ಯಾರ್ಥಿ ನಿಲಯಗಳ ಸಂಖ್ಯಾಬಲ ಹೆಚ್ಚಳಕ್ಕೆ ಕ್ರಮ, ಗ್ರಾಮೀಣ ವಸತಿ ಯೋಜನೆಯಡಿ ಶೀಘ್ರ ಫಲಾನುಭವಿಗಳ ಆಯ್ಕೆ, ಸಮುದಾಯ ಶೌಚಾಲಯ ನಿರ್ಮಾಣ, ಕೊರಗ ಜನಾಂಗದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಪ್ರಕೃತಿ ವಿಕೋಪ ಪರಿಹಾರಾರ್ಥವಾಗಿ 2 ಕೋಟಿ ರೂ. ಅನುದಾನ ಜಿಲ್ಲೆಗೆ ಬಿಡುಗಡೆ ಯಾಗಿದೆ. ಬೈಂದೂರು ಮತ್ತು ಬ್ರಹ್ಮಾವರ ಹೊಸ ತಾಲ್ಲೂಕು ರಚನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ಡಾ. ಆಚಾರ್ಯ ತಿಳಿಸಿದರು. ಕಾರ್ಯಕ್ರಮಕ್ಕೆ ಮುನ್ನ ಆಕರ್ಷಕ ಪಥ ಸಂಚಲನ ನಡೆಯಿತು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಬಿಂಬಿಸುವ ನೃತ್ಯವೈವಿಧ್ಯಗಳು, ಕಾರ್ಕಳ ಎರೊನಾಟಿಕ್ ಸೊಸೈಟಿ ಸದಸ್ಯರು ಪ್ರದರ್ಶಿಸಿದ ವೈಮಾನಿಕ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಜಿಲ್ಲಾಧಿಕಾರಿ ಹೇಮಲತಾ ಪೊನ್ನುರಾಜ್, ಪ್ರಭಾರ ಎಸ್‌ಪಿ ಎಂ. ಬಿ. ನಾಗರಾಜ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್, ಮೂರನೇ ಹಣಕಾಸು ಆಯೋಗ ಅಧ್ಯಕ್ಷ ಎ. ಜಿ. ಕೊಡ್ಗಿ, ನಗರಸಭೆ ಅಧ್ಯಕ್ಷ ದಿನಕರ ಶೆಟ್ಟಿ, ತಾ. ಪಂ. ಅಧ್ಯಕ್ಷೆ ಗೀತಾ ಪ್ರಭು, ಮಾಜಿ ಸಂಸದ ವಿನಯಕುಮಾರ್ ಸೊರಕೆ ಮೊದಲಾದವರಿದ್ದರು. ಶಿಕ್ಷಕ ಕುದಿ ವಸಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

(ಚಿತ್ರ ವರದಿ : ಜೆ ಪಿ ಉಡುಪಿ http://www.gulfkannadiga.com/newsdisplay.php?id=12504)

Udupi: Koti – Chennayya Theme Park to be Set Up at Karkala
– Minister Dr Acharya
Udupi, Aug 15: The setting up of a coastal development authority for efficiently managing progress across the coastal district, setting up of a Koti-Chennayya theme park at Karkala, grant of 75,000 kilo liters of subsidized diesel for fisheries, setting up of a Yakshagana study center and Kanakadas study center at Mahatma Gandhi Memorial (MGM) College in the city, completing the access road to Bannanje, Kalsanka, Kadiyali, and Manipal, from National Highway (NH) 17, developing a service road parallel to NH 17 through Ambagilu, Nittoor, Gundibail, Kalsanka, Kinni Mulky and Diana Circle, were some of the upcoming projects announced by Dr V S Acharya, district-in-charge and state home minister, during Independence Day celebrations held at municipal grounds, in Ajjarkad, on Friday, August 15.
(news & pics in http://www.daijiworld.com/news/news_disp.asp?n_id=49875&n_tit=Udupi%3A%20Koti%20%96%20Chennayya%20Theme%20Park%20to%20be%20Set%20Up%20at%20Karkala%20%96%20Minister%20Dr%20Acharya)

No comments: