Thursday, August 7, 2008

ಪೊಲೀಸರ ಮೇಲೆ ಹಲ್ಲೆ ನಡೆಸುವ ಪ್ರವೃತ್ತಿ...

ಪ್ರತಿಭಟನೆ ಹೆಸರಲ್ಲಿ ಪೋಲಿಸ್ ಪಡೆಯ ಮೇಲೆ ಹಲ್ಲೆ ನಡೆಸುವುದು ಫ್ಯಾಶನ್ ಆಗಿ ಬಿಟ್ಟಿದೆ...ಇದೂ ಒಂದು ತರಹದ ಭಯೋತ್ಪಾದನೆಯೇ! ಆಡಳಿತದ ಮೇಲೆ, ಪೊಲೀಸರ ಮೇಲೆ ಜನರಲ್ಲಿ ಜುಗುಪ್ಸೆ ಬರುವಂತೆ ಮಾಡುವುದು ಇವರ ಉದ್ದೇಶ! ಇವರಿಗೆ ಈ ಧೈರ್ಯ ಏಕೆಂದರೆ ಇವರ ಬೆಂಬಲಕ್ಕೆ ಪ್ರತಿ ಪಕ್ಷ , ಸಮಾಜ ದ್ರೋಹಿ ಸಂಘಟನೆಗಳು ಯಾವಾಗಲೂ ರೆಡಿ! ಪೋಲಿಸ್ ಅಧಿಕಾರಿ ಮೇಲೆ ಹಲ್ಲೆ! ಇದು ಕೂಡ "ಶಾಂತ" ಪ್ರತಿಭಟನೆಯೇ?
ಇವರು ಮುಗ್ದ ಪ್ರತಿಭಟನ ಕಾರರು!
ಈ ಬಸ್ ನಲ್ಲಿ ಇದ್ದ ಮಗುವಿಗೆ ಕಲ್ಲೇಟು ಬಿದ್ದಿದೆ!

ಈ ಜನರನ್ನು ಕಾನೂನಿನ ಪ್ರಕಾರ ದಂಡಿಸಿದರೆ ಸ್ವಯಮ್ ಘೋಷಿತ ಮಾನವ ಹಕ್ಕುಗಳ ಪ್ರತಿಪಾದಕರು ( ನಿಜವಾದ ಮಾನವ ಹಕ್ಕುಗಳ ಪ್ರತಿಪಾದಕರ ಬಗ್ಗೆ ನಮಗೆ ವಿಶ್ವಾಸ ಇದೆ ) ಎಲ್ಲೆಲ್ಲಿಂದಲೋ ಪ್ರತ್ಯಕ್ಷವಾಗುತ್ತಾರೆ! ಆದರೆ ಇದೆ ಮಾನವ ಹಕ್ಕುಗಳ ಪ್ರತಿಪಾದಕರಿಗೆ ಗಲಭೆಯಲ್ಲಿ ಗಂಭೀರವಾಗಿ ಗಾಯಗೊಂಡ ಪೋಲಿಸರಾಗಲಿ, ಮಗುವಾಗಲಿ (ಬಸ್ಸಿನಲ್ಲಿದ್ದ ಮಗುವಿಗೆ ಕಲ್ಲೇಟು ಬಿದ್ದಿದೆ ) ಕಾಣಿಸುವುದೇ ಇಲ್ಲ!

No comments: