Thursday, August 14, 2008

ಪ್ರಕೃತಿ ವಿಕೋಪ : ಉಡುಪಿ ಜಿಲ್ಲೆ : ವಿ ಎಸ್ ಆಚಾರ್ಯ ರಿಂದ ವೀಕ್ಷಣೆ, ಆದೇಶ


ಉಡುಪಿ:ಆಗಸ್ಟ್,14. ಜಿಲ್ಲೆಯಲ್ಲಿ ಕಳೆದ 2-3 ದಿನಗಳಿಂದ ಸಂಭವಿಸುತ್ತಿರುವ ಗಾಳಿ ಮಳೆಗೆ ಹಾನಿಗೊಂಡ ಮನೆ, ತೋಟಗಾರಿಕೆ ಬೆಳೆ ಇತ್ಯಾದಿಗಳ ಪರಿಹಾರ ಮೊತ್ತವನ್ನು ಶೀಘ್ರವಾಗಿ ವಿತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯ ಗೃಹಮಂತ್ರಿ ಡಾ. ವಿ. ಎಸ್. ಆಚಾರ್ಯ ಅಧಿಕಾರಿಗಳಿಗೆ ಸೂಚಿಸಿದರು.
ತೀವ್ರ ಗಾಳಿಯಿಂದ ಹಾನಿಗೊಂಡ ಮೂಡುಬೆಳ್ಳೆ ಮತ್ತು ಉಪ್ಪೂರು ಪ್ರದೇಶಗಳಿಗೆ ಇಂದು (ಗುರುವಾರದ೦ದು)ಭೇಟಿ ನೀಡಿದ ಸಚಿವ ಡಾ. ಆಚಾರ್ಯ ಅಂದಾಜು ನಷ್ಟ ಲೆಕ್ಕಹಾಕುವಂತೆ ಸೂಚಿಸಿದರು. ವಿಕೋಪ ಪರಿಹಾರ ನಿಧಿಯಡಿ ಸೂಕ್ತ ಪರಿಹಾರಧನ ನೀಡುವಂತೆ ಸ್ಥಳದಲ್ಲಿದ್ದ ಕಂದಾಯ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಸಂತ್ರಸ್ತರಿಗೆ ಸಾಂತ್ವನ ನೀಡಿದ ಸಚಿವ ಆಚಾರ್‍ಯ, ಪ್ರಕೃತಿ ವಿಕೋಪಗಳಿಂದಾಗಿ ನಷ್ಟ ಸಂಭವಿಸಿದಲ್ಲಿ ಮೂರು ಸ್ತರಗಳ ತಹರೇವಾರಿ ಪರಿಹಾರಧನ ವಿತರಿಸಲಾಗುವುದು. ಪೂರ್ತಿ ಹಾನಿಗೊಂಡ ಕಚ್ಚಾಮನೆಗಳಿಗೆ 10 ಸಾವಿರ ಹಾಗೂ ಪಕ್ಕಾ ಮನೆಗಳಿಗೆ 25 ಸಾವಿರ ರೂ. ವರೆಗೆ ಪರಿಹಾರ ನೀಡಲಾಗುವುದು. ತೀವ್ರ ಪ್ರಮಾಣದಲ್ಲಿ ನಷ್ಟವಾದ ಕಚ್ಚಾ ಮನೆಗಳಿಗೆ ೩ ಸಾವಿರ ಮತ್ತು ಪಕ್ಕಾ ಮನೆಗಳಿಗೆ 5 ಸಾವಿರ ರೂ. ವರೆಗೆ ಪರಿಹಾರ ಅಂತೆಯೇ ಭಾಗಶ: ಹಾನಿಗೊಂಡ ಮನೆಗಳಿಗೆ 1,5000 ರೂ. ಪರಿಹಾರ ನೀಡಲು ಸರಕಾರ ನಿರ್ಧರಿಸಿದೆ ಎಂದರು. ತೋಟಗಾರಿಕೆ ಬೆಳೆ ನಾಶ ಪ್ರಮಾಣ ಕುರಿತು ತೋಟಗಾರಿಕೆ ಇಲಾಖೆ ಅಂದಾಜು ಮಾಡಲಿದೆ. ಸದ್ರಿ ಇಲಾಖೆ ಸೂಚಿಸಿದ ಮೊತ್ತವನ್ನು ನೀಡಲಾಗುವುದು ಎಂದೂ ಸಚಿವರು ಹೇಳಿದರು.
ಸಚಿತ್ರ ವರದಿ : ಜೆ ಪಿ ಉಡುಪಿ , ಗಲ್ಫ್ ಕನ್ನಡಿಗ

No comments: