ಶಾಲಾಭಿವೃದ್ಧಿ ಸಮಿತಿ, ಕಾಲೇಜು ಅಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿಗಳ ಸಂಘಗಳು ಈ ಮಹತ್ತರ ಯೋಜನೆಗೆ ಕೈಹಾಕಿವೆ. ನೆಲ ಮತ್ತು ಮೂರು ಮಹಡಿಗಳಲ್ಲಿ ೬೦೦ ವಿದ್ಯಾರ್ಥಿಗಳಿಗೆ ೧೦೦ ಕೋಣೆಗಳ ನಿರ್ಮಾಣ, ಶಾಲಾ ಮೈದಾನ, ಗ್ರಂಥಾಲಯ, ಸಭಾಭವನ, ಪ್ರಯೋಗಾಲಯ, ಆಡಳಿತ ಕಟ್ಟಡ ಹೀಗೆ ಸಮಗ್ರ ಅಭಿವೃದ್ಧಿಗೆ ನೀಲಿನಕಾಶೆ ಸಿದ್ಧವಾಗಿದ್ದು ಅದನ್ನು ಜ. ೧೮ರಂದು ಜರಗಿದ ಶಾಲಾಭಿವೃದ್ಧಿ ಸಮಿತಿಯ ಸಭೆಗೂ ಮುನ್ನ ಶಾಲೆಯ ಪ್ರಾಕ್ತನ ವಿದ್ಯಾರ್ಥಿ ಗೃಹಸಚಿವ ಡಾ ವಿ.ಎಸ್. ಆಚಾರ್ಯ ಅವರಿಗೆ ಮಾಹಿತಿ ನೀಡಲಾಯಿತು.
ಸುಮಾರು ೩.೭೫ ಎಕ್ರೆ ಪ್ರದೇಶದಲ್ಲಿ ಬೋರ್ಡ್ ಹೈಸ್ಕೂಲಿದೆ. ಈ ಸ್ಥಳದ ನೈಋತ್ಯ ಭಾಗದಲ್ಲಿ ಸುಮಾರು ೧ ಎಕ್ರೆ ಪ್ರದೇಶದಲ್ಲಿ ಬಹುಮಹತಿ ಸಮುಚ್ಛಯವನ್ನು ನಿರ್ಮಿಸು ವುದು. ಉಳಿದ ಸ್ಥಳವನ್ನು ಶಾಲಾ ಮೈದಾನಕ್ಕೆ ಉಪಯೋಗಿಸಿ ಕೊಳ್ಳುವುದು. ನಾಲ್ಕು ಭಾಗಗಳಲ್ಲೂ ಕಟ್ಟಡವನ್ನು ನಿರ್ಮಿಸಿ ಮಧ್ಯಭಾಗವನ್ನು ಸಭೆಗಳಿಗೆ ಮತ್ತಿತರ ಚಟುವಟಿಕೆಗಳಿಗೆ ಆಸ್ಪದ ಮಾಡಿಕೊಟುವಂತೆ ಚೌಕಿಮನೆಯಂತೆ ಕಟ್ಟಡ ನಿರ್ಮಿಸು ವುದು. ಪೂರ್ವಭಾಗದ ನೆಲ ಅಂತಸ್ತಿನಲ್ಲಿ ಮತ್ತು ಪ್ರಥಮ ಅಂತಸ್ತಿನಲ್ಲಿ ತಲಾ ೧೬ರಂತೆ ಒಟ್ಟು ೩೨ ಅಂಗಡಿಗಳನ್ನು ನಿರ್ಮಾಣಮಾಡುವುದು. ಇದರಿಂದ ಕನಿಷ್ಠ ಎರಡು ಕೋಟಿ ರೂ.ಗಳ ಆದಾಯವನ್ನು ನಿರೀಕ್ಷಿಸಲಾಗಿದೆ. ಉಳಿದ ಮೊತ್ತಕ್ಕೆ ಸುಮಾರು ೧.೫ ಕೋ.ರೂ.ಗಳ ಪೈಕಿ ರೂ. ೧ ಕೋ.ರೂ. ಗಳನ್ನು ಸರಕಾರದಿಂದ ಸಹಾಯ ಪಡೆಯುವುದು ಮತ್ತು ರೂ.೫೦ ಲಕ್ಷ ಗಳನ್ನು ದಾನಿಗಳಿಂದ ಸಂಗ್ರಹಿಸುವ ಬಗ್ಗೆ ಚಿಂತನೆಗಳು ನಡೆದಿವೆ ಎಂದು ತಿಳಿಸಲಾಗಿದೆ.
ಮಿನಿ ಹೆರಿಟೇಜ್
ಬೋರ್ಡ್ ಶಾಲೆಯಾಗಿ ಪರಿವರ್ತನೆಗೊಳ್ಳುವ ಮೊದಲಿದ್ದ ಕಾರಾಗೃಹ, ನೇಣುಗಂಬ, ತಾಲೂಕು ಕಚೇರಿ, ಕಾವಲು ಗೋಪುರ ಇವುಗಳನ್ನು ಸಣ್ಣ ಸ್ವರೂಪದಲ್ಲಿ ಪುನಾರಚಿಸಿ ಸಂರಕ್ಷಿಸಲು ಚಿಂತನೆಗಳು ನಡೆದಿವೆ ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.
ಮಣಿಪಾಲ ಪೈಗಳ ಪೈಕಿ ಟಿ.ಎ. ಪೈ, ಡಾ ರಾಮದಾಸ್ ಪೈ, ದಿಕೆ.ಕೆ. ಪೈ, ಕು.ಶಿ. ಹರಿದಾಸ ಭಟ್ಟ, ಡಾ ಎಂ.ವಿ. ಕಾಮತ್ ಅನೇಕ ಪ್ರಸಿದ್ಧ ಪುರುಷರು ಈ ಶಾಲೆಯ ಹಳೆ ವಿದ್ಯಾರ್ಥಿಗಳಾಗಿದ್ದಾರೆ.
೨೦೧೫ಕ್ಕೆ ಕನಸು ನನಸು೧೮೯೦ರಲ್ಲಿ ಆರಂಭವಾದ ಬೋರ್ಡ್ ಶಾಲೆ ೨೦೧೫ರ ವೇಳೆಗೆ ೧೨೫ನೇ ವರ್ಷವನ್ನು ಆಚರಿಸಿಕೊಳ್ಳುತ್ತದೆ. ಈ ವೇಳೆಗೆ ಮಾಸ್ಟರ್ ಪ್ಲಾನ್ ಸಂಪೂರ್ಣ ಸಿದ್ಧವಾಗಲಿದೆ. ಆರಂಭದಲ್ಲಿ ನೆಲ ಅಂತಸ್ತು ಮತ್ತು ಪ್ರಥಮ ಅಂತಸ್ತು ಸಿದ್ಧಗೊಳ್ಳುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನೀವು ಬೋರ್ಡ್ ಹೈ ಸ್ಕೂಲ್ ಉಡುಪಿಯ ಹಳೆ ವಿದ್ಯಾರ್ಥಿ ಆಗಿದ್ದರೆ, ನಿಮ್ಮ ಅನಿಸಿಕೆ ನಮಗೆ ತಿಳಿಸಿ...
ವರದಿ : ಉದಯವಾಣಿ/ ಗಲ್ಫ್ಕನ್ನಡಿಗ
No comments:
Post a Comment