ಉಡುಪಿ: ನಾಣ್ಯಕ್ಕೂ ಪರಂಪರೆಗೂ ಸಂಬಂಧವಿದೆ. ನಾಣ್ಯ ಮತ್ತು ಭಾಷೆಯ ನಡುವಿನ ಅಂತರ್ ಸಂಬಂಧದಿಂದ ಸಂಸ್ಕೃತಿಗಳ ಕುರಿತು ಅಧ್ಯಯನ ನಡೆಸಲು ಸಾಧ್ಯವಾಗುತ್ತದೆ ಎಂದು ರಾಜ್ಯ ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ ಹಾಗೂ ಪೂರ್ಣಪ್ರಜ್ಞ ಕಾಲೇಜುಗಳ ಸಂಯುಕ್ತ ಅಶ್ರಯದಲ್ಲಿ ಉಡುಪಿ ಪೂರ್ಣಪ್ರಜ್ಞ ಕಾಲೇಜು ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ದಕ್ಷಿಣ ಭಾರತ ನಾಣ್ಯಶಾಸ್ತ್ರ ಸಂಘದ ೧೯ನೆ ವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ರವಿವಾರ ಮಾತನಾಡುತ್ತಿದ್ದರು.
ದಕ್ಷಿಣ ಭಾರತ ನಾಣ್ಯ ಶಾಸ್ತ್ರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಎ.ವಿ. ನರಸಿಂಹ ಮೂರ್ತಿ ಸ್ವಾಗತಿಸಿದರು. ಪ್ರೊ. ಬಿ.ಎಂ. ಹೆಗ್ಡೆ ವಂದಿಸಿದರು.
ಪ್ರೊ. ಕೆ. ಸದಾಶಿವ ರಾವ್ ಕಾರ್ಯಕ್ರಮ ನಿರೂಪಿಸಿದರು. (ಚಿತ್ರ ವರದಿ : ಜೆ ಪಿ ಗಲ್ಫ್ ಕನ್ನಡಿಗ)
No comments:
Post a Comment