ವಾಹಿನಿಗಳಿಗೆ ಸೀನಿದರೂ ಸುದ್ದಿ!: (Courtesy: Media Mirchi) ಮಾಧ್ಯಮ ಕಣ್ಣಿಗೆ ಹೆಮ್ಮಾರಿ, ಮಹಾಮಾರಿಯಾಗಿ ಕಂಡಿರುವ ಹಂದಿಜ್ವರ ಜನಜೀವನದ ಉಳಿದೆಲ್ಲ ವಿದ್ಯಮಾನಗಳನ್ನೂ ಹಿಂಬದಿಗೆ ಸರಿಸಿ ಬಿಟ್ಟಿದೆ. ರಾಜ್ಯದಲ್ಲಿರುವ ಅಪಾಯಕಾರಿ ಡೆಂಗೇ, ಚಿಕನ್ಗುನ್ಯಾ ಪಿಡುಗನ್ನು ಮರೆಮಾಚಿದೆ. ನಕ್ಸಲೀಯರು, ಭಯೋತ್ಪಾದಕರು, ಕೊಲೆಗಡುಕರ ಕೈಗಳಲ್ಲಿ ಹತರಾಗುವ ಜನರ ಸಂಖ್ಯೆಗಳಿಗಿಂತ ಈ ಸೋಂಕಿನಿಂದ ಅಸುನೀಗಿದವರ ಸಂಖ್ಯೆ ಅಷ್ಟೇನೂ ದೊಡ್ಡದಲ್ಲದಿದ್ದರೂ, ಟಿ.ವಿ ವಾಹಿನಿಗಳು ಅದರಲ್ಲೂ ಖಾಸಗಿ ರಾಷ್ಟ್ರೀಯ ವಾಹಿನಿಗಳು ಎಬ್ಬಿಸಿದ ಅಬ್ಬರ ಜನರಲ್ಲಿ ಅತಿಯಾದ ಆತಂಕ, ತಲ್ಲಣ ಉಂಟು ಮಾಡಿದೆ ಎಂದು ಮಾಧ್ಯಮ ನಿಕಟವತರ್ಿ ಮಿತ್ರರೊಬ್ಬರು ಅಲವತ್ತುಕೊಂಡರು.
ಮೊದಲು ಅಬ್ಬರ ಮಾಡಿ ರೋಗ ಇಲ್ಲದ ಜನರೂ ಕೂಡ ತಪಾಸಣೆಗಾಗಿ ಆಸ್ಪತ್ರೆಗಳಿಗೆ ದೌಡಾಯಿಸುಂತೆ ಮಾಡಿ ಈಗೀಗ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕಾದ ಸರಳ ಸೂಚನೆಗಳನ್ನು ಮಾಧ್ಯಮ ನೀಡಲಾರಂಭಿಸಿದೆ. ಇದು ಮೊದಲೆ ಅದು ಮಾಡಬೇಕಾದ ಕೆಲಸ. ಆರಂಭದಲ್ಲಿ ಒಂದು ರಾಷ್ಟ್ರೀಯ ವಾಹಿನಿಯಂತೂ ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ತನ್ನ ವರದಿಗಾರರು ಕುಟುಕು ಕಾಯರ್ಾಚರಣೆ ನಡೆಸಿ ರೋಗ ತಡೆಗೆ ಆಸ್ಪತ್ರೆಗಳು ಅದೆಷ್ಟು ಅದಕ್ಷ ಎಂದು ಬಿಂಬಿಸುವ ಪ್ರಯತ್ನ ನಡೆಸಿತು. ಅದರ ವರದಿಗಾರರು ರೋಗಿಗಳೆಂದು ಹೇಳಿಕೊಂಡು ಆಸ್ಪತ್ರೆಗಳಿಗೆ ಹೋಗಿ ಈ ಕುಟುಕು ವರದಿ ಮಾಡಿದರು. ಇದಕ್ಕೆ ಹೊರತಾಗಿಲ್ಲ ಎಂದು ಪತ್ರಿಕೆಗಳು ಹಂದಿಜ್ವರವನ್ನು ಹೆಮ್ಮಾರಿ, ಮಹಾಮಾರಿ ಎಂದು ಬಣ್ಣಿಸುವುದು ಇನ್ನೂ ಮುಂದುವರೆದಿದೆ. ಆದರೂ ಪತ್ರಿಕೆಗಳು ಜನ ಕಂಗೆಡುವ ಅಗತ್ಯವಿಲ್ಲವೆಂದು ಸಂಪಾದಕೀಯಗಳಲ್ಲಿ ಹೇಳಿರುವುದು ತುಸು ನೆಮ್ಮದಿಯ ಸಂಗತಿ. ಅದರಲ್ಲಂತೂ ಪರಿಸರ ಪತ್ರಕರ್ತ ನಾಗೇಶ್ ಹೆಗಡೆ ಅಂಕಣ ರೋಗ ಕುರಿತು ರೋಚಕ ಹಿಮ್ಮಾಹಿತಿ ನೀಡಿದೆ. ಹೀಗೆ ಜ್ವರ ದೇಶದ ಬಹು ಭಾಗ ಬರದ ದವಡೆಯಲ್ಲಿ ಸಿಲುಕಿರುವುದನ್ನೂ ಮರೆಮಾಚಿದೆ. (ಹದ್ದಿನ ಕಣ್ಣು/ Khaadri S Achuthan)
Sunday, August 30, 2009
H1N1: Facts in support of our observation!
Subscribe to:
Post Comments (Atom)
1 comment:
It is strange that media has already forgotten about Swine Flu. Media started scaremongering suddenly and equally suddenly there is zero coverage.
Everything points to a planned scare tactic aimed at creating panic.
Can't govt investigate go back into archives and see which media house first started this hype and put two and two together?
Post a Comment