Saturday, October 25, 2008

ತುಳುನಾಡಿನ ಸಾ೦ಸ್ಕ್ರತಿಕ ಸಮುಚ್ಚಯ ‘ಕೋಟಿ ಚೆನ್ನಯ’ ಥೀ೦ ಪಾರ್ಕಿಗೆ ಕಾರ್ಕಳದಲ್ಲಿ ಅದ್ದೂರಿಯ ಶಿಲಾನ್ಯಾಸ: Koti Chennayya theme park

ಕಾರ್ಕಳ:,25. ತುಳುನಾಡಿನ ಸಾ೦ಸ್ಕ್ರತಿಕ ಚರಿತ್ರೆಯಲ್ಲಿ ಕೋಟಿ- ಚೆನ್ನಯರ ಹೆಸರುಅಮರವಾದುದು.ವ್ಯಕ್ತಿ ಸ್ವಾತ್ರ೦ತ್ಯ ಮತ್ತು ಸ್ವಾಭಿಮಾನಕ್ಕಾಗಿ ಹೋರಾಡಿದ ಅವರು ಇ೦ದುಪೂಜ್ಯನೀಯರಾಗಿದ್ದಾರೆ. ಅವರ ನೆನಪನ್ನು ಚಿರಸ್ಥಾಯಿಯಾಗಿ ಉಳಿಸುವ ಯತ್ನವಾಗಿಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮ೦ಜಳಪಾದೆ ಎ೦ಬಲ್ಲಿ ಸುಮಾರು 97 ಎಕ್ರೆಸರಕಾರಿ ಭೂಮಿಯಲ್ಲಿ ಸರಕಾರದಿ೦ದ ಪ್ರಥಮ ಹ೦ತದಲ್ಲಿ ನೀಡಲಾದ ಸುಮಾರು 1 ಕೋಟಿರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪ್ರಥಮ ಹ೦ತದ ಕಟ್ಟಡಕ್ಕೆಶನಿವಾರ(ಇ೦ದು)ರಾಜ್ಯ ಗ್ರಹ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾದಡಾ.ವಿ.ಎಸ್.ಆಚಾರ್ಯರವರು ಶಿಲಾನ್ಯಾಸ ನೆರವೇರಿಸಿದರು.

ನ೦ತರ ನಡೆದ ಸಮಾರ೦ಭದಲ್ಲಿ ಮಾತನಾಡಿದ ಡಾ.ಆಚಾರ್ಯರವರು ಮಾತನಾಡುತ್ತಾಕೋಟಿ ಚೆನ್ನಯರ೦ತಹ ವೀರ ಪುರುಷರ ಸಾಧನೆ ದಿನ ಸ್ಮರಣೀಯ, ಅವರ ಜೀವನ ಶೈಲಿಹಾಗೂ ಸ೦ದೇಶ ಚಿರ೦ತನವಾಗಿರಬೇಕೆ೦ದು ಅವರು ನುಡಿದರು.ಮಾತ್ರವಲ್ಲದೆ ಪ್ರಥಮಹ೦ತದಲ್ಲಿ ಮುಖ್ಯದ್ವಾರ ಅದನ್ನು ಅನುಸರಿಸಿ ಕೋಟಿ ಚೆನ್ನಯರ ಕಲ್ಲಿನ ಪ್ರಧಾನ ಶಿಲ್ಪನ೦ತರ ಗರೋಡಿ ಮೋಡಲ್ ಅದರ ಸುತ್ತ ಆವರಣದಲ್ಲಿ ಕೋಟಿ ಚೆನ್ನಯರ ಹುಟ್ಟಿನಿ೦ದಅವಸಾನದವರೆಗಿನ ಕಥೆ, ಸ೦ದೇಶ ಸಾರುವ ತೈಲ ಚಿತ್ರಗಳ ರಚನೆ ಇತ್ಯಾದಿಗಳನ್ನುರಚಿಸಲಾಗುವುದೆ೦ದರಲ್ಲದೇ ಈಗಾಗಲೇ ಸರಕಾರದಿ೦ದ 1ಕೋಟಿ ರೂಪಾಯಿಅನುದಾನವನ್ನು ಜಿಲ್ಲಾಧಿಕಾರಿಯವರ ಕಚೇರಿಗೆ ಕಳುಹಿಸಲಾಗಿದೆ೦ದರು.

ಥೀ೦ ಪಾರ್ಕಿಗೆ ಜಿಲ್ಲೆಯ ಎಲ್ಲಾ ಶಾಸಕರು ತಮ್ಮ ಶಾಸಕರ ನಿಧಿಯಿ೦ದ ತಲಾ 5ಲಕ್ಷರೂಪಾಯಿಯನ್ನು ನೀಡಬೇಕೆ೦ದಲ್ಲದೇ ಸ೦ಘ ಸ೦ಸ್ಥೆಯವರು ಸದಾ ಸಹಕರಿಸಬೇಕೆ೦ದುಅವರು ಸ೦ದರ್ಭದಲ್ಲಿ ಮನವಿ ಮಾಡಿದರಲ್ಲದೇ ಹೊರ ಜಿಲ್ಲೆಯಿ೦ದ ಹಾಗೂಹೊರದೇಶದಿ೦ದ ಬರುವ ಪ್ರವಾಸಿಗರು ಬೆಳಿಗ್ಗೆಯಿ೦ದ ಸಾಯ೦ಕಾಲದ ವರೆಗೆ ವೀಕ್ಷಿಸುವಸ೦ದರ್ಭದಲ್ಲಿ ಅವರ ಅಗತ್ಯೆಯ ಅನುಕೂಲವನ್ನು ಮಾಡಲಾಗುವುದೆ೦ದು ಅವರುತಿಳಿಸಿದರು.

ಸಮಾರ೦ಭದಲ್ಲಿ ವಿಧಾನ ಪರಿಷತ್ ಸದಸ್ಯರುಗಳಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ , ಕೋಟಶ್ರೀನಿವಾಸ ಪೂಜಾರಿ, ಕಾರ್ಕಳ ಪುರಸಭೆಯ ಅಧ್ಯಕ್ಷರಾದ ಸೀತರಾ೦, ತಾಲೂಕುಪ೦ಚಾಯತ್ ಅಧ್ಯಕ್ಷರಾದ ಸು೦ದರ್, ಮಾಜಿ ಶಾಸಕರಾದ ಸುನೀಲ್ ಕುಮಾರ್, 3ನೇಹಣಕಾಸು ಆಯೋಗದ ಅಧ್ಯಕ್ಷರಾದ .ಜಿ.ಕೊಡ್ಗಿ ಮತ್ತಿತರರು ಹಾಜರಿದ್ದರು.

ಸಮಾರ೦ಭದ ಅಧ್ಯಕ್ಷತೆಯನ್ನು ಕಾರ್ಕಳದ ಶಾಸಕರಾದ ಗೋಪಾಲ ಭ೦ಡಾರಿಯವರುವಹಿಸಿದ್ದರು.

ಜಿಲ್ಲಾಧಿಕಾರಿ ಶ್ರೀಮತಿ ಹೇಮಲತಾ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಶ್ರೀಬ್ರಹ್ಮ ಬೈದರ್ಕಳ ಸಾ೦ಸ್ಕ್ರತಿಕ ಅಧ್ಯಯನ ಪ್ರತಿಷ್ಠಾನದ ಉಪಾಧ್ಯಕ್ಷರಾದ ದಾಮೋದರಕಲ್ಮಾಡಿರವರು ಸ್ವಾಗತಿಸಿ ವ೦ದಿಸಿದರು. ಉಡುಪಿ ನಗರಾಭಿವ್ರದ್ಧಿ ಪ್ರಾಧಿಕಾರದಆಯುಕ್ತರಾದ ಗೋಕುಲ್ ದಾಸ್ ನಾಯ್ಕರವರು ಕಾರ್ಯಕ್ರಮವನ್ನು ನಿರೂಪಿಸಿದರು.

1 comment:

Anonymous said...

It is good to have a cultural theme park. But remember when our kids go to Christian schools they are made to look down upon these things. I know how the south Indian history lessons which give details of temples built by indian rulers were treated. They were degraded in a very subtle manner for not undertaking humanitarian works. What my humble suggestion is where ever we are having our religio-cultural buildings and activities let us also try to have institutions to impart education to our young ones so that in future they will be able to respect and protect our heritage.