Sunday, October 26, 2008

ದೀಪಾವಳಿಯ ಶುಭಾಶಯ


ದೀಪಾವಳಿ ಎಲ್ಲರಿಗೂ ಸಂತಸ, ಸಮೃದ್ಧಿ ಯನ್ನು ತರಲಿ
May this festival of lights bring happiness, and prosperity


ಹಬ್ಬ ಎಂದಾಕ್ಷಣ ಮುಖ್ಯವಾಗಿ ನೆನಪಿಗೆ ಬರುವುದೇ ದೀಪಾವಳಿ. ಬಹುಶಃ ಪಟಾಕಿಸಿಡಿಸಲು ಅವಕಾಶವಿದೆ ಎಂಬ ಕಾರಣಕ್ಕೆ ಬಾಲ್ಯದಿಂದಲೂ ಮಕ್ಕಳಿಗೆ ಅತ್ಯಂತಪ್ರಿಯವಾಗಿ ಬಿಟ್ಟಿರುವುದೇ ಮನದಂಗಳದಲ್ಲಿ ಮನಸ್ಥಿತಿ ಚಿರಸ್ಥಾಯಿಯಾಗಲುಕಾರಣವೂ ಇರಬಹುದು.

ಸಮಾಜದ ಎಲ್ಲ ವರ್ಗದವರೂ, ಜಾತಿ-ಸಮುದಾಯದವರೂ ಭೇದ-ಭಾವ ಮರೆತುಭ್ರಾತೃತ್ವ, ಸೌಹಾರ್ದತೆಯ ಪ್ರತೀಕವಾಗಿ ಆಚರಿಸುವ ಹಬ್ಬಗಳಲ್ಲಿ ಅತ್ಯಂತಪ್ರಮುಖವಾದದ್ದು ಕೂಡ ದೀಪಾವಳಿಯೇ. ಪ್ರತಿಯೊಂದು ಹಬ್ಬವೂ ತನ್ನದೇ ಆದಸಂದೇಶವನ್ನು ಸಾರುತ್ತದೆ. ಅದೇ ರೀತಿ ದೀಪಾವಳಿ ಕೂಡ ಅಜ್ಞಾನದ ಕತ್ತಲನ್ನುಹೋಗಲಾಡಿಸಿಕೊಳ್ಳುವ ಮನಸ್ಸು ಬೆಳೆಸಿಕೊಳ್ಳಬೇಕೆಂಬ ಸಂದೇಶ ಸಾರುತ್ತದೆ
.

ಮಹಾಭಾರತದ ಒಂದು ಪ್ರಸಂಗ ಇಲ್ಲಿ ಉಲ್ಲೇಖನೀಯ, ಯುಗಾವತಾರಿ ಶ್ರೀ ಕೃಷ್ಣನುಅದೊಂದು ದಿನ ಕೌರವನಲ್ಲಿ ಉಭಯ ಕುಶಲೋಪರಿ ಸಂದರ್ಭ ಕೇಳುತ್ತಾನೆ "ಲೋಕದಜನರು ಹೇಗೆ?". ಅದಕ್ಕೆಅವನ ಉತ್ತರ - "ಎಲ್ಲರೂ ಕೆಟ್ಟವರು, ಎಲ್ಲರೂಸ್ವಾರ್ಥಿಗಳು". ಅದೇ ಪ್ರಶ್ನೆಯನ್ನು ಶ್ರೀಕೃಷ್ಣನು ಯುಧಿಷ್ಠಿರನ ಮುಂದಿಡುತ್ತಾನೆ.ಧರ್ಮಜ್ಞಾನಿಯಾದ ಧರ್ಮರಾಯನ ಉತ್ತರ ಹೀಗಿರುತ್ತದೆ. "ಭಗವಾನ್,ಲೋಕದಲ್ಲಿರುವವರು ಎಲ್ಲರೂ ಒಳ್ಳೆಯವರು
".

ಪ್ರಸಂಗ ಇಲ್ಲಿ ಉಲ್ಲೇಖಿಸಿದ್ದೇಕೆ? ಹೌದು. ಮನದ ಅಂಧಕಾರ ತೊಲಗಿದರೆ ಜೀವನಸ್ವರ್ಗಸಮಾನ, ಜಗತ್ತನ್ನು ನಾವು ಯಾವ ದೃಷ್ಟಿಯಿಂದ ಕಾಣುತ್ತೇವೆ ಎಂಬುದು ಇಲ್ಲಿ ಬಹಳಮುಖ್ಯ. ನಮ್ಮ ಮನಸ್ಸಿನ ಭಾವನೆಯೇ ಕನ್ನಡಿಯಂತೆ ಕೆಲಸ ಮಾಡುತ್ತದೆ. ಜಗತ್ತುಕೆಟ್ಟದು ಅಂತ ನಾವು ತಿಳಿದುಕೊಂಡರೆ, ಎಲ್ಲವೂ ಕೆಟ್ಟದೇ ಮತ್ತು ಎಲ್ಲರೂ ಕೆಟ್ಟವರೇ. ಅದೇ,ಲೋಕವದೆಷ್ಟು ಸುಂದರ ಅಂತ ಅರಿತುಕೊಂಡು ಮುಂದಡಿಯಿಟ್ಟರೆ, ನಮ್ಮಲ್ಲಿ ನಕಾರಾತ್ಮಕಮನೋಭಾವವಿಲ್ಲದೆ, ಧನಾತ್ಮಕ ಚಿಂತನೆ ಮೈಗೂಡಿಸಿಕೊಂಡರೆ... ಪ್ರತಿ ಕ್ಷಣವೂ ಸುಂದರ,ಪ್ರತಿ ಕಾರ್ಯವೂ ಸುಲಲಿತ
.

ಅವಲಂಬಿತವಾಗಿದೆ. ಲೋಕವೇ ಕೆಟ್ಟಹುಳಗಳಿಂದ ತುಂಬಿದೆ ಎಂದಿರುವ ಕೌರವನ ಮನಸ್ಥಿತಿನಮ್ಮದಾದಲ್ಲಿ ಜೀವನದಲ್ಲಿ ಮುಂದೆ ಬರುವುದು ಸಾಧ್ಯವೇ ಇಲ್ಲ. ಮೊದಲು ತನ್ನನ್ನುಅರಿತುಕೊಂಡು, ತಪ್ಪು ತಿದ್ದಿಕೊಳ್ಳಬೇಕು. ಅದಕ್ಕಲ್ಲವೇ ಹೇಳಿರುವುದು "ಅರಿವೇ ಗುರು"ಎಂದು, ಇದರೊಂದಿಗೆ, ಸುತ್ತಮುತ್ತಲಿದ್ದವರ ಒಳ್ಳೆಯತನವನ್ನುದುರುಪಯೋಗಪಡಿಸಿಕೊಳ್ಳದೆ ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಜೀವನದ ಹಾದಿ ತುಂಬಾಬೆಳಕು, ಬೆಳಕು, ಬೆಳಕು.

ದೀಪಾವಳಿಯಲ್ಲಿ ಸುಡುಮದ್ದು ಸುಡುವುದು ಮತ್ತು ಸಿಡಿ ಮದ್ದು ಸಿಡಿಸುವುದಕ್ಕೂ ತನ್ನದೇ ಆದಕಾರಣಗಳಿವೆ. ಮನದೊಳಗಿನ ಕೆಟ್ಟದ್ದನ್ನು ಸುಟ್ಟು ಬಿಡುವುದು, ಜಗತ್ತೆಂಬ ಮಾಯೆಯಲ್ಲಿಹರಡಿಕೊಂಡಿರುವ ದುಷ್ಟಶಕ್ತಿಗಳನ್ನು ಸದ್ದು ಮಾಡಿ ಓಡಿಸುವುದು ಇದರ ಹಿಂದಿರುವ ಮರ್ಮ
.

ಆಂಗ್ಲರ ನಾಲಿಗೆಯಲ್ಲಿ ದೀಪಾವಳಿಯು ಅಪಭ್ರಂಶಗೊಂಡು 'ದಿವಾಳಿ' ಎಂದೇ ಆಗಿದೆ.ಜಾಗತಿಕವಾಗಿ ಆರ್ಥಿಕ ಬಿಕ್ಕಟ್ಟು ತಲೆದೋರಿರುವ ಇಂದಿನ ದಿನಗಳಲ್ಲಿ ಆಂಗ್ಲರ ಈನಾಮಕರಣವನ್ನು ನಾವು ಒಪ್ಪಬಹುದಾಗಿದ್ದರೂ, ಹ್ಯಾಪಿ ದಿವಾಳಿ ಆಗೋದು ಬೇಡವೇ ಬೇಡ, "ದೀಪಾವಳಿ ಶುಭಾಶಯಗಳು" ಎಂದೇ ವಿನಿಮಯ ಮಾಡಿಕೊಳ್ಳೋಣ.

(ಲೇಖನ ಕೃಪೆ : ಜೆ ಪಿ ಗಲ್ಫ್ ಕನ್ನಡಿಗ)

No comments: