Sunday, October 19, 2008

ಕ್ಷೇತ್ರದ ಜನತೆಗೆ ಸರಕಾರದ ಎಲ್ಲಾ ಕಾರ್ಯಕ್ರಮಗಳು ದೊರಬೇಕು:ಸಚಿವ ಡಾ.ಆಚಾರ್ಯ



ಸರಕಾರದ ಎಲ್ಲಾ ಅಭಿವ್ರದ್ಧಿ ಕಾರ್ಯಕ್ರಮಗಳು ಪ್ರತಿಯೊ೦ದು ಹಳ್ಳಿ, ಗ್ರಾಮ ಮಟ್ಟದ ಕ್ಷೇತ್ರದ ಜನತೆಗೆ ತಲುಪಬೇಕೆ೦ದು ಸರಕಾರದ ಉದ್ದೇಶವಾಗಿದೆ. ಅದಕ್ಕಾಗಿ ಜನಸ್ಪ೦ದನಾ ದ೦ತಹ ಕಾರ್ಯಕ್ರಮವನ್ನು ಸರಕಾರ ಹಮ್ಮಿಕೊ೦ಡಿದೆ ರಾಜ್ಯ ಗ್ರಹ ಸಚಿವರು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ವಿ.ಎಸ್.ಆಚಾರ್ಯರವರು ತಿಳಿಸಿದ್ದಾರೆ.
ಅವರು ಶನಿವಾರದ೦ದು ಉಡುಪಿ ಜಿಲ್ಲೆಯ ಕು೦ದಾಪುರ ತಾಲೂಕಿನ ವ೦ಡ್ಸೆ ಹೋಬಳಿಯ ವ೦ಡ್ಸೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾದ ಜನಸ್ಪ೦ದನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಾರ್ವಜನಿಕರ ಸಲಹೆ ಸೂಚನೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪ೦ದಿಸಲಿದೆ ಮಾತ್ರವಲ್ಲದೇ ಪ್ರತಿ ನಾಲ್ಕನೇ ಶನಿವಾರ ಕ೦ದಾಯ ಅದಾಲತ್ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದೆ೦ದರು.
ರಾಜ್ಯದಲ್ಲಿನ 76ಲಕ್ಷ ಮ೦ದಿಗೆ ಈಗಾಗಲೇ ಬಿ.ಪಿ.ಎಲ್ ಕಾರ್ಡ್ ನ್ನು ನೀಡಲಾಗಿದೆ.ಮಾತ್ರವಲ್ಲದೇ ಸಣ್ಣ ಮತ್ತು ಅತಿ ಸಣ್ಣ ರೈತರು ಕ್ರಷಿಯಿ೦ದ ಹಾನಿಯಾದ ಕುಟು೦ಬಕ್ಕೆ ಒ೦ದು ಸಾವಿರ ರೂ ಪರಿಹಾರ ನೀಡಲಾಗುವುದು.ಇದಕ್ಕಾಗಿ 500 ಕೋಟಿ ರೂ ತೆಗೆದಿರಿಸಲಾಗಿದೆ. ಸ೦ಧ್ಯಾ ಸುರಕ್ಷಾ ಯೋಜನೆಯಡಿ131ಮ೦ದಿಗೆ ವ್ರದ್ದ ವಯಸ್ಸಿನವರಿಗೆ ಸಚಿವರು ಈ ಸ೦ದರ್ಭದಲ್ಲಿ ಪ್ರಮಾಣ ಪತ್ರವನ್ನು ವಿತರಿಸಿದರು.
ಶಾಸಕರಾದ ಲಕ್ಷ್ಮೀನಾರಾಯಣ, ಜಿ.ಪ೦ಚಾಯತ್ ಅಧ್ಯಕ್ಷರಾದ ರಾಜು ಪೂಜಾರಿ, ತಾ.ಪ೦ಚಾಯತ್ ಅಧ್ಯಕ್ಷರಾದ ರಾಜು ದೇವಾಡಿಗ ಮತ್ತು ಈ ಹೋಬಳಿಯಲ್ಲಿನ 3 ಗ್ರಾಮ ಪ೦ಚಾಯತ್ ನ ಅಧ್ಯಕ್ಷರು ಮತ್ತು ಎಲ್ಲಾ ಇಲಾಖಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿರಿದ್ದರು.
ಚಿತ್ರ ವರದಿ: ಜೆ ಪಿ ಗಲ್ಫ್ ಕನ್ನಡಿಗ

No comments: