Monday, October 20, 2008

ಕರ್ನಾಟಕ ಪೋಲಿಸ್ ಗೆ ಇನ್ನಷ್ಟು ಬಲ!ಮಂಗ್ಳೂರು,ಬೆಳಗಾವಿ, ಗುಲ್ಬರ್ಗಕ್ಕೂ ಪೊಲೀಸ್ ಆಯುಕ್ತರ ನೇಮಕ

ಧಾರವಾಡ, ಅ.೧೯ .ಬೆಳಗಾವಿ, ಮಂಗಳೂರು, ಗುಲ್ಬರ್ಗ ನಗರಗಳಲ್ಲಿ ಪೊಲೀಸ್ ಕಮಿಷನರೇಟ್ ಸ್ಥಾಪಿಸಲು ನಿರ್ಧರಿಸಿರುವುದಾಗಿ ಗೃಹಸಚಿವ ವಿ.ಎಸ್.ಆಚಾರ್ಯ ಇಲ್ಲಿ ತಿಳಿಸಿದರು.
ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಈ ನಿರ್ಧಾರಕ್ಕೆ ಬಂದಿದ್ದೇವೆ. ಎಲ್ಲಾ ನಗರಗಳಲ್ಲೂ ಹೊಸ ಪೊಲೀಸ್ ಠಾಣೆಗಳಿಗೆ ಪ್ರಸ್ತಾವನೆಗಳು ಬಂದಿವೆ. ಇದಕ್ಕಾಗಿ ಈ ವರ್ಷ ೧೦ ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳುತ್ತಿದ್ದೇವೆ. ರಾಜ್ಯದಲ್ಲಿ ಒಟ್ಟಾರೆ ೧ ಲಕ್ಷ ಪೊಲೀಸರಿದ್ದಾರೆ. ಆದರೆ, ನಮ್ಮ ಜನಸಂಖ್ಯೆಗೆ ಇದು ಸಾಕಾಗುವುದಿಲ್ಲ ಎಂದು ವಿವರಿಸಿದರು.
ಧಾರವಾಡದಲ್ಲಿ ಡಾ.ಕಿದಿಯೂರು ಅವರ ನಿವಾಸಕ್ಕೆ ಭಾನುವಾರ ಖಾಸಗಿ ಭೇಟಿ ನೀಡಿದ್ದ ಸಚಿವರು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ರಾಜ್ಯಕ್ಕೆ ತಲಾ ಒಂದು ಸಾವಿರ ಪೊಲೀಸರ ಸಾಮರ್ಥ್ಯ ಇರುವ ಎರಡು ಐ‌ಆರ್‌ಬಿ (ಭಾರತೀಯ ಮೀಸಲು ಪಡೆ) ಗಳನ್ನು ಕೇಂದ್ರ ಸರ್ಕಾರವು ಮಂಜೂರು ಮಾಡಿದೆ. ಈ ಪಡೆಗಳ ಸ್ಥಾಪನೆಗೆ ಕೇಂದ್ರ ಹಣ ನೀಡಲಿದೆ. ಅದರ ನಿರ್ವಹಣೆ ಹೊಣೆ ರಾಜ್ಯಕ್ಕೆ ಇರುತ್ತದೆ. ಅಲ್ಲದೆ ಬಾಂಬ್ ನಿಷ್ಕ್ರಿಯ ದಳ ಸದ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರವಿದೆ. ಉತ್ತರ ಕರ್ನಾಟಕದಲ್ಲೂ ಅಂತಹ ಪಡೆಗಳನ್ನು ಸ್ಥಾಪಿಸಲು ಕುರಿತು ಚಿಂತನೆ ನಡೆದಿದೆ ಎಂದರು.
ಇಡೀ ಪೊಲೀಸ್ ಇಲಾಖೆಯನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯಕ್ರಮ ಹಾಕಿಕೊಳ್ಳುತ್ತಿದ್ದೇವೆ. ಅವುಗಳನ್ನು ಹೇಳುವುದಕ್ಕಿಂತ ಮಾಡಿ ತೋರಿಸುವುದು ಉತ್ತಮ.
ಹಂಪಿಯು ಪ್ರವಾಸಿ ತಾಣವಾಗಿದೆ. ಅಲ್ಲದೆ ಅಲ್ಲಿನ ಸ್ಮಾರಕಗಳ ರಕ್ಷಣೆಯ ಹೊಣೆಯು ಹೆಚ್ಚಿದೆ. ಹೀಗಾಗಿ ಅಲ್ಲಿ ಡಿವೈ‌ಎಸ್ಪಿ ನೇತೃತ್ವದ ಉಪ ವಿಭಾಗ ಸ್ಥಾಪಿಸಲು ತೀರ್ಮಾನಿಸಿದ್ದೇವೆ ಈ ಎಲ್ಲವೂ ಸದ್ಯದಲ್ಲೇ ಜಾರಿಗೆ ಬರಲಿವೆ ಎಂದು ತಿಳಿಸಿದರು.
ದೇಶದಲ್ಲಿ ಮಹಾರಾಷ್ಟ್ರ ಹೊರತುಪಡಿಸಿ ಯಾವ ರಾಜ್ಯದಲ್ಲೂ ರಾಜ್ಯ ಸರ್ಕಾರದ ವಿಶೇಷ ಗುಪ್ತಚರ ಪಡೆಗಳು ಇಲ್ಲ. ಹಾಗೆಯೇ ನಮ್ಮ ರಾಜ್ಯದಲ್ಲೂ ಒಂದು ಮಟ್ಟದ ಗುಪ್ತಚರ ಪಡೆ ಇದೆ. ಆದ್ದರಿಂದ ಗುಪ್ತಚರ ವಿಭಾಗ ಭದ್ರಪಡಿಸಲು ಕೇಂದ್ರದ ಗುಪ್ತಚರ ವಿಭಾಗದ ನೆರವು ಕೇಳಿದ್ದೇವೆ. ಇದಕ್ಕೆ ಕೇಂದ್ರ ಗೃಹ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ ಎಂದರು.

K'nataka to follow Maharashtra Intelligence set up

BANGALORE: Shaken by all the terror links Karnataka has earned in the recent past, the state government is going in for a big revamp of its police force, the most important of which, is setting up a trained and dedicated State Intelligence Cell modelled after Maharashtra's. This was hinted at by the Home Minister V S Acharya at Dharwad.
The State will have three more police commissionerates, one each in Mangalore, Belgaum and Gulbarga. This apart, 10,000 police constables will be freshly recruited, the minister said.
The Home Ministry is going in for a professional intelligence cell a la Maharashtra model which, again, is fashioned after the Central Intelligence Bureau. Maharashtra had gone in for a makeover in its intelligence set up after the serial bomb blasts of July 2006.
The new set up will have a IPS officer outside the police department to head it. It will have personnel trained in anti-terrorism, they will be permanent staff with attractive salary and perks in place of the prevailing system of posting police personnel for a three-year stint, police sources said. The police cadres posted in intelligence today consider it a "punishment" transfer. It will also have an extensive informer network and adequate fund to shadow the terror modules and their network.
Karnataka has an Anti-terror squad and Anti-Naxal squad. Intelligence gathering will now get a prime place.
Acharya is also in favour of an inter-state police committee to monitor the Bangladeshi-Pakistani jehadis whose hands are strongly suspected in the recent spate of blasts across the country.Even while bemoaning the Centre's political chicanery, the home minister favoured a close cooperation with Central agencies in information sharing and a close nexus among states that are frequent victims of terror merchants.
The BJP government in Karnataka has been greatly upset over the fact that 10 of the 15 terror suspects held recently by Karnataka-Mumbai police happened to be from Karnataka. The seizure of larch cache of arms, stocks of explosives, arms and other things in Chikmagalore and Dakshin Kannada districts have proved beyond doubt that terror peddlers have firm roots in the state.
But, the State police have been woefully short of staff, and the successive governments sidestepped the issue. According to 2006 policing statistics, the sanctioned strength of the police force is 58,000. But, the actual strength is only 48,000. Of those, only 4,859 officers have investigating powers. In 2006, the total number of investigations for offences under the Indian Penal Code reached 1.68 lakhs. In theory, this means 35 cases per investigating officer.
The reality is a different story. Investigating officers work 10-12 hours or more per day to compensate for the shortage of personnel, they are routinely deployed on other duties in the middle of an investigation and complaints of police brutality are high.

Newsreport by PK Surendran , DNA

No comments: