ಉಗ್ರ ನಿಗ್ರಹದಂಥ ಕೆಲಸವನ್ನು ಬರಿಯ ಹೇಳಿಕೆ ಕೊಡುತ್ತಾ ಮಾಡಬೇಕೆ? ಅಥವಾ ತರ್ಕ ಬದ್ಧವಾಗಿ, ವ್ಯವಸ್ಥಿತವಾಗಿ, ಗುಪ್ತವಾಗಿ ಮಾಡಬೇಕೆ?
ವರದಿ ಮಾಡುವ ಭರದಲ್ಲಿ ಏನೇನೋ ಗೀಚಿದರೆ ಏನು ಹೇಳಬೇಕು? ಬಹಿರಂಗವಾಗಿ ಆಲೋಚನೆಯನ್ನು ಹೇಗೆ ಮಾಡುವುದೆಂದು ಸಂಜೆವಾಣಿಯ ವರದಿಗಾರ ಮಹಾಶಯರು ತಿಳಿಸಿದರೆ ಬಹಳ ಉಪಕಾರ!
( ಅವರೇ ಹೇಳಿದಂತೆ ಇದು ವೈಯಕ್ತಿಕ /ಖಾಸಗಿ ಕಾರ್ಯಕ್ರಮ ಅಲ್ಲವೇ?)
ಅಷ್ಟಾಗಿ ಜನರನ್ನು ಅನಾವಶ್ಯಕ ಹೆದರಿಸುವ ಕೆಲಸ ಏಕೆ? ತನಿಖೆ, ಪತ್ತೆದಾರಿಕೆ ಕೆಲಸಗಳನ್ನು ಸಂಬಂಧ ಪಟ್ಟ ಇಲಾಖೆಗಳು ಅವರಷ್ಟಕ್ಕೆ ಮಾಡಲು ಮಾಧ್ಯಮಗಳು, ಬುದ್ದಿ ಜೀವಿಗಳು, ಮಾನವ ಹಕ್ಕು ವಾದಿಗಳು ಬಿಟ್ಟರೆ ಬಹಳ ಉತ್ತಮ !
==================================
ಪೊಲೀಸರಿಗೆ ಕಲ್ಲು ಹೊಡೆದವರಿಗೆ ಮಾನವ ಹಕ್ಕು ಪಾಠ!
(ಸ್ವಘೋಷಿತ ಮಾನವ ಹಕ್ಕು ವಾದಿಗಳು ಉಗ್ರರ ಪರ ವಕಾಲತ್ತು ಮಾಡುವುದು, ಯಾವಗಲೂ ಬಹು ಸಂಖ್ಯಾಕರನ್ನು ಹೀಗಳೆಯುವುದು, ಪೊಲೀಸರ ಮಾನ ಹಾನಿ ಮಾಡುವುದು ಎಲ್ಲರಿಗೂ ತಿಳಿದ ವಿಚಾರ...
ಈಗ ಅವರು ಪೊಲೀಸರ ಮೇಲೆ ಕಲ್ಲು ಹೊಡೆದವರಿಗೆ ಮಾನವ ಹಕ್ಕು ಪಾಠ ಹೇಳಿ ಕೊಡುತ್ತಿದ್ದಾರೆ! )
No comments:
Post a Comment