Wednesday, July 23, 2008

ಚಿಕುನ್ ಗುನ್ಯ : ಭಯ ಹರಡುವ ಬದಲು ಮಾಹಿತಿ ಹರಡಿ : ರೋಗ ತಡೆಗಟ್ಟಿ

(ಹಗಲು ಕಚ್ಚುವ ಈಡಿಸ್ ಎಜಿಪ್ತಿ ಸೊಳ್ಳೆ)


ಇದುವರೆಗೂ ಚಿಕೂನ್ಗುನ್ಯಾ ತಡೆಗಟ್ಟುವ ಬಗ್ಗೆ ಸುಲಭ ಉಪಾಯವನ್ನು ಯಾರೂ ಹೇಳುತ್ತಿಲ್ಲ, ಪಾಲಿಸುತ್ತಿಲ್ಲ...
ಸೊಳ್ಳೆ ಕಡಿತ ತಡೆದರೆ, ಸೊಳ್ಳೆ ಸಂತಾನ ಅಭಿವೃದ್ದಿ ತಡೆದರೆ ರೋಗ ಹರಡದು. ಸ್ವಯಮ್ ಔಷದಃ ಸೇವನೆ, ಅನಗತ್ಯ ಮಾತ್ರೆ ಸೇವನೆ ಆರೋಗ್ಯಕ್ಕೆ ಹಾನಿ (ಯಾವುದೇ ವೈದ್ಯಕೀಯ ರೋಗ ತಡೆಗಟ್ಟಲು ನಿಶ್ಚಿತ ಮದ್ದು ಇಲ್ಲ - ಲಸಿಕೆ ಇನ್ನು ಬಂದಿಲ್ಲ, ಬಂದರೂ ದುಬಾರಿ ) . ರೋಗ ಪತ್ತೆ ಹಚ್ಚಲು ಇರುವ ಪರೀಕ್ಷೆ ದುಬಾರಿ (ಒಂದು ವಾರ ತಗಲುತ್ತದೆ- 3000 rs) , ಆ ಖರ್ಚಿನಲ್ಲಿ ರೋಗ ಪರಿಹಾರ ಸಾಧ್ಯ!

ಉಡುಪಿ ತಾಲೂಕು ವೈದ್ಯಾಧಿಕಾರಿ ಡಾ.ಎಚ್.ಅಶೋಕ್ ಹೇಳುತ್ತಾರೆ: ಈ ರೋಗದ ಬಗ್ಗೆ ಜನರಲ್ಲಿ ಮಾಹಿತಿಯ ಕೊರತೆ ಇದೆ. ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಲೂ ಸ್ವಚ್ಚತೆಯನ್ನು ಕಾಪಾಡುವುದು ಅಗತ್ಯ. ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರ ವಹಿಸುವುದು ಸೂಕ್ತ. ಈ ಮೂಲಕ ಈ ರೋಗವನ್ನು ತಡೆಯಲು ಸಾಧ್ಯ. ಯಾವುದೇ ಜ್ವರ ಬಂದಾಗ ತಮಗೆ ಬೇಕಾದ ವೈದ್ಯನ್ನು ಸಂಪರ್ಕಿಸಿ, ಆದರೆ ವೈದ್ಯರನ್ನು ಪದೇ ಪದೇ ಬದಲಾಯಿಸುವುದು ಸರಿಯಲ್ಲ

ಎಲ್ಲ ತೊಂದರೆಗಳಿಗೂ , ಸೊಳ್ಳೆ ಕಡಿತಕ್ಕೂ ಸರ್ಕಾರವನ್ನೇ ದೂರುವುದು ಇಂದಿನ "ಫ್ಯಾಷನ್" ಆಗಿದೆ!

1 comment:

Dr.K.G.Bhat,M.B:B.S said...

ಸೊಳ್ಳೆ ಕಡಿತಕ್ಕೆ ಸರ್ಕಾರವನ್ನು ದೂರುವುದು ನಮ್ಮ ಅಭ್ಯಾಸವೇನೋ ಸರಿ.ಆದರೆ ಸರ್ಕಾರ ಕೂಡ ರೋಗ ಬಂದಾಗ ಮಾತ್ರ ಎಚ್ಚರವಾಗುವುದು ಯಾಕೆ?ಯಾವುದೇ ಕಾಯಿಲೆ ಇರಲಿ ನಮ್ಮ ಬಳಿ ಸಾಕಷ್ಟು ಮದ್ದು ಇವೆ,ಸರ್ಕಾರೀ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಿ ಅಂತ ಮಂತ್ರಿ ಹೇಳುವುದೇತಕ್ಕೆ ಸಾರ್?ಇದ್ದವರೂ ಇಲ್ಲದವರೂ ಸರ್ಕಾರಿ ಆಸ್ಪತ್ರೆಗೆ ಬಂದರೆ ಏನಾಗಬೇಕು.ರೋಗಿ ಜಾಸ್ತಿಯಾದಲ್ಲಿ ಹೆಚ್ಚಿನ ಸಿಬ್ಬಂದಿ ನೇಮಕವಾಗುವುದಿಲ್ಲ.ಕಳೆದ ಬಾರಿ ಚಿಕಂಗುನ್ಯ ಬಂದಾಗ ವೈದ್ಯರ ಅಭಾವದ ಕಾರಣ ನನ್ನ ಖಾಸಗಿ ಪ್ರಾಕ್ಟಿಸ್ ಬಿಟ್ಟುಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ಅನುಭವದಲ್ಲಿ ಹೇಳುತ್ತಿದ್ದೇನೆ.