Sunday, July 27, 2008

ಚಿಂತನೆ: ಬಾಂಬ್ ಸ್ಫೋಟದ ನಂತರ

ಬಾಂಬ್ ಸ್ಫೋಟವಾದ ಕೂಡಲೇ ರಾಜ್ಯದೆಲ್ಲೆಡೆ ಅಶಾಂತಿ ಮತ್ತು ಕೋಮುಗಲಭೆಯಾಗಬೇಕೆಂಬುದು ದುಷ್ಕರ್ಮಿಗಳ ಆಶಯ.
ಪರಿಸ್ಥಿತಿ ಹೀಗಿರುವಾಗ ಇಡೀ ರಾಜ್ಯದ ಸುರಕ್ಷತೆಯ ಹೊಣೆ ಹೊತ್ತಿರುವ ಗೃಹ ಸಚಿವರು ಬಾಂಬ್ ಸ್ಪೋಟದ ಸ್ಥಳಕ್ಕೆ ಅಥವಾ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಾ "ಪೊಟೋ"ಗೆ ಪೋಸ್ ಮಾಡುತ್ತಾ ಸಮಯ ಕಳೆಯಬೇಕೇ? ಅಥವಾ ಟೀವೀ Anchorಗಳಂತೆ ಮೈ ಮೇಲೆ ದೆವ್ವ ಬಂದಂತೆ ಸುಮ್ಮ ಸುಮ್ಮನೆ speculation ಮಾಡುತ್ತಾ ಜನರನ್ನು ಹೆದರಿಸಬೇಕೇ?

ಅಥವಾ
ಬಾಂಬ್ ಸ್ಫೋಟದ ತನಿಖೆಯ ಜಾಡು ಪತ್ತೆ ಮಾಡುವತ್ತ ಮತ್ತು ರಾಜ್ಯಾದ್ಯಂತ ಪರಿಸ್ಥಿತಿ ಶಾಂತವಾಗಿರುವಂತೆ ಪ್ರಯತ್ನ ಮಾಡಬೇಕೇ?

ಬಾಂಬ್ ಸ್ಫೋಟದ ನಂತರ ಸರಕಾರದ ರೆಸ್ಪಾನ್ಸ್ ಏನು, ಪೊಲೀಸರು ಏನು ಮಾಡುತ್ತಾರೆ, ಗಾಯಾಳುಗಳನ್ನು ಹೇಗೆ ಮತ್ತು ಎಲ್ಲಿಗೆ ಸಾಗಿಸುತ್ತಾರೆ ಎಂಬುದನ್ನು ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ದುಷ್ಕರ್ಮಿಗಳು ತೆರೆದ ಕಣ್ಣುಗಳಿಂದ ಫಾಲೋ ಮಾಡುತ್ತಿರುತ್ತಾರೆಯೆಂಬುದರಲ್ಲಿ ಸಂಶಯವೇ ಇಲ್ಲ.
ನಿನ್ನೆಯ ಅಹ್ಮದಾಬಾದ್ ಸ್ಪೋಟದಲ್ಲಿ ಕಂಡಂತೆ ಮೊದಲ ಸ್ಪೋಟದ ಸ್ವಲ್ಪ ಹೊತ್ತಿನ ನಂತರ ಈ ಬಾರಿ ಆಸ್ಪತ್ರೆಗಳಲ್ಲೂ ಬಾಂಬ್ ಸಿಡಿಸಲಾಗಿದೆ.
ಈಗಿನ ದುಷ್ಕರ್ಮಿಗಳು ಉಪಯೋಗಿಸುವುದು ಎಲ್ಲಾ ಹೈಟೆಕ್- ಸೆಲ್ ಫೋನ್, ಇಂಟರ್ನೆಟ್. ಜನಪ್ರತಿನಿಧಿಗಳ reaction ಏನು, ಪೊಲೀಸರೇನು ಮಾಡುತ್ತಾರೆಂಬುದು ಅವರಿಗೆ real-timeನಲ್ಲಿ ಲಭ್ಯ.
ಹೀಗಿರುವಾಗ ಎಂದಿನಂತೆ ಯಾವುದೋ ಓಭೀರಾಯನ ಕಾಲದ "ಘಟನೆ ಸ್ಥಳಕ್ಕೆ ಭೇಟಿ", "ಆಸ್ಪತ್ರೆಗಳಿಗೆ ಭೇಟಿ"ಯೆಂಬ ಕಾಟಾಚಾರಗಳು ಅಗತ್ಯವೇ ಎಂಬುದರ ಬಗ್ಗೆ ಚರ್ಚೆ ನಡೆಯಬೇಕಾಗಿದೆ.

5 comments:

Unknown said...

manya acharyare yidu nimmade abhiprayve ?
madhyamagalu adesha niduva, judgment needuv pravrutti salladu

Dr V S Acharya said...

Haagendu ee barahadalli ellide?

Anonymous said...

ಸರಿಯಾದ ಮಾತು.

ತನಿಖೆ ಮಾಡುವ ಬದಲು ವಿಐಪಿಗಳ ಸ್ಥಳ ಭೇಟಿ, ಆಸ್ಪತ್ರೆ ಭೇಟಿಗಳಿಗೆ ಕಾವಲಿಗೇ ಪೊಲೀಸರ ಸಮಯ ವ್ಯರ್ಥವಾಗುವುದನ್ನು ತಪ್ಪಿಸಬೇಕಾಗಿದೆ.

ಪ್ರಜ್ನೆ ತಪ್ಪಿ ಮಲಗಿರುವ, burn wound ಗಳಿಂದ ತತ್ತರಿಸಿ ಮಲಗಿರುವ ರೋಗಿಗಳಿಗೆ ಭೇಟಿಯ ನೆಪದಲ್ಲಿ ಉಪದ್ರವ ಕೊಡುವ ಪದ್ದತಿ ನಿಲ್ಲಬೇಕು.

ಸುಂದರ ಸಾಲಿಯಾನ್, ಯಲಹಂಕ

Anonymous said...

sariyaada maathu helidiri, Acharyare. When we know the terrorists can follow what's the after effect of their action, its always better to be silent and take actions against them.

Anonymous said...

If the ministers do not visit the people and the media say, "Illi ishtondu galate aaguvaaga maanya mantriyavaru elli iddaru?" It becomes a issue. The opposition party joins, whole world starts shouting about the inhumanity of the govt.ministersetc.

The people and the enemies of the govt want some pampering than real work.

Actually I agree that the the govt and police can save time and utilise it for useful acitivities.