Wednesday, July 30, 2008

ವಿಜಯ ಕರ್ನಾಟಕದಲ್ಲಿ ಓದಿದ ನೆನಪು..

ನಿಂದಕರಿರಬೇಕಯ್ಯ ಆದರೆ ಕುತರ್ಕವಲ್ಲ!


ಸದಾಶಯದಿಂದ ಬರೆದ ಲೇಖನದ ಮೇಲೂ ಕುತರ್ಕದ ಗೂಬೆ ಕೂರಿಸಿದರೆ ಏನನ್ನಬೇಕು? ರಾಜಕಾರಣಿಗಳು / ಆಡಳಿತಗಾರರು ಸುಮ್ಮನೆ ಭಯೋತ್ಪಾದಕರ ಸಂಚಿಗೆ ಬಳಿ ಬೀಳಬಾರದು, ಅಮಾಯಕರು ಆಸ್ಪತ್ರೆಯಲ್ಲಿ ಒದ್ದಾಡುತ್ತಿರುವಾಗ ತೊಂದರೆ ಕೊಡಬಾರದು ಎಂದರೆ ತಪ್ಪೇನಿದೆ? ಅಷ್ಟಕ್ಕೂ ಆಸ್ಪತ್ರೆ ಬಳಿ ಬಾಂಬ್ ಸ್ಪೋಟ ಆಗಬಹುದೆಂದು 25 ನೇ ಜುಲೈ ಅಂದು ಬರೆದ ಲೇಖನದಲ್ಲಿ ಹೇಳಿದ್ದು ಗುಜರಾತ್ ನಲ್ಲಿ ನಡೆದೇ ಬಿಟ್ಟಿತು...ಅಲ್ಲಿನ ಎಂ ಪಿ ಹರೇನ್ ಪಾಠಕ್ ಸ್ವಲ್ಪದರಲ್ಲಿ ಬಚಾವ್ ಆದರು...ರಾಜಕಾರಣಿಗಳ ಎಂದಿನ ನಡತೆ (ಆಸ್ಪತ್ರೆಗೆ ಮಾಧ್ಯಮ ಸಹಿತ ಮೆರವಣಿಗೆ) ಅರಿತಿದ್ದ ಭಯೋತ್ಪಾದಕರ ಸಂಚಿಗೆ ಆಸ್ಪತ್ರೆಯ 23 ರೋಗಿಗಳು, ಇಬ್ಬರು ವೈದ್ಯರು ಅನ್ಯಾಯವಾಗಿ ಸಾಯಬೇಕಾಯಿತು...(http://drvsacharya.blogspot.com/2008/07/blog-post_26.html, http://drvsacharya.blogspot.com/2008/07/secondary-bomb-blasts-at-hospitals-in.html, http://drvsacharya.blogspot.com/2008/07/our-response-to-terrorism.html)

ಈ ಎಲ್ಲ ಲೇಖನಗಳ ಹಿಂದೆ ಬಹಳ ಅಧ್ಯಯನದ ಸಾರವಿದೆ, ಕೇಳಿ/ ನೋಡಿ ತಿಳಿದ ಸಂಗತಿಗಳಿವೆ...ಇದೆಲ್ಲವನ್ನು ಕಡೆಗಣಿಸಿ ಏನೋ ಕುತರ್ಕ ಬರೆದರೆ ಏನನ್ನಬೇಕು? (ಬಹುಷಃ ವರದಿಗಾರರು ತಮ್ಮ ಪೂರ್ವಾಶ್ರಮದ "ಅಲೆ"ಯಿಂದ ಇನ್ನೂ ಹೊರ ಬಂದಿಲ್ಲ ಅನಿಸುತ್ತದೆ)

ಈ ಕುತರ್ಕದ ವರದಿಗಾರರಿಗೆ ಇನ್ನೊಂದು ಪ್ರಶ್ನೆ: ತಮ್ಮ ಬರಹದಲ್ಲಿ ಹೇಳಿದ ಸಚಿವರ ಇನ್ನೊಂದು ಬ್ಲಾಗ್ ಯಾವುದು? http://www.drvsacharya.blogspot.com/ ಬ್ಲಾಗ್ ಕಳೆದ ವರ್ಷದ ಮೇ ತಿಂಗಳಿಂದ ಅಸ್ತಿತ್ವದಲ್ಲಿ ಇದೆ...(refer to OLDER POSTS)ಹಾಗೂ ಯಾವ ಟೀಕೆಗೂ ಉತ್ತರ ಹೇಳುವ ಮಾಧ್ಯಮ ಇದಲ್ಲ. (ಪತ್ರಿಕೆಗಳ ಪೋಸ್ಟ್ ಮಾರ್ಟಂ ಮಾಡುವ ಅಗತ್ಯವೂ ಇಲ್ಲ ) ದಯವಿಟ್ಟು ಸ್ವಲ್ಪ ಸಂಯಮದಿಂದ ಬರೆಯಿರಿ...ಭಾಷಾ ಶುದ್ದಿ ಇರಲಿ...ಏಕೆಂದರೆ ನೀವು ಈಗ ಇರುವುದು ಘನತೆವೆತ್ತ ವಿಜಯ ಕರ್ನಾಟಕದಲ್ಲಿ!

ಈ ಬ್ಲಾಗ್ ನ ವಿಳಾಸ ಪ್ರಚುರ ಪಡಿಸಿದ್ದಕ್ಕಾಗಿ ಬಹಳ ಧನ್ಯವಾದಗಳು.

3 comments:

Anonymous said...

ಅದೇನೋ ನುಡಿಯಿದೆಯಲ್ಲ - ಕೊಚ್ಚೆಯಲ್ಲಿ ಬೆಳೆದ ಹಂದಿಗೆ ಬೇರಾವುದೇ ಆಹಾರ ರುಚಿಸದು. ಅಂತಹ ಪರಿಸ್ಥಿತಿಯಾಗಿದೆ ಶ್ರೀ ಕುಂದೇಶ್ವರರದ್ದು!

"ಅಲೆ"ಯಂತಹ ರೋಲ್ ಕಾಲ್ ಪತ್ರಿಕೆಯಲ್ಲಿ ಅಪ್ರೆಂಟಿಸ್ ಮಾಡಿದ ಜಿತೇಂದ್ರ ಕುಂದೇಶ್ವರರು "ವಿಜಯ ಕರ್ನಾಟಕ"ದಂತಹ ಪ್ರತಿಶ್ಟಿತ ಪತ್ರಿಕೆಗೆ ಹೋದರೂ ತಮ್ಮ ಹಳೆಯ ಚಾಳಿಯನ್ನು ಬಿಡದಿರುವುದು ವಿಷಾದನೀಯ.

ಸುದ್ದಿಯಿಲ್ಲದಿರುವ ಕಡೆ ಸುದ್ದಿ ಸೃಷ್ಟಿಸುವುದು ಜಿತೇಂದ್ರರಂತವರಿಗೆ ಮಾತ್ರ ಸಾಧ್ಯ.

Anonymous said...

I did not see anything wrong in saying why people should avoid visiting blast sites and hospitals.

It appears to me that Vijaya Karnataka's reporter is trying hard to create non-existent divide between CM and HM. This is a typical tactic of yellowpapers but it is a pity that even Vijaya Karnataka is publishing such idiotic reports.

Does the reporter even know what Blog is? And that Blogs are designed for open frank discussion??

Anonymous said...

ಬ್ಲಾಗೆಂಬುದು ಪತ್ರಿಕೆಗಳಂತೆ one-way communication ಅಲ್ಲ ಎಂಬುದನ್ನು ಮಾನ್ಯ ಜಿತೇಂದ್ರರು ಅರಿಯಬೇಕಾಗಿದೆ.

ಮುಂಚಿನಂತೆ ಪತ್ರಿಕೆಗಳಲ್ಲಿ ಬಂದದೆಲ್ಲವನ್ನು ಜನರು ನಂಬುತ್ತಾರೆಯೆಂಬ ಭ್ರಮೆಯಲ್ಲಿ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳ ನಡುವೆ ಇಲ್ಲದ ಕಂದಕವನ್ನು ಸೃಶ್ಟಿ ಮಾಡುವ ಕಂತ್ರಿ ಕೆಲಸ ಮಾಡುವ ಮಟ್ಟಕ್ಕೆ ವಿಜಯ ಕರ್ನಾಟಕದ ವರದಿಗಾರರು ಇಳಿದಿರುವುದು ಸೋಜಿಗದ ಸಂಗತಿ.

ಬ್ಲಾಗಲ್ಲಿ ಚರ್ಚೆ ನಡಿಯಲಿಯೆಂಬ ಸದುದ್ದೇಶದಿಂದ ಅನಿಸಿಕೆಯನ್ನು ಹೇಳಿದರೆ ಅದನ್ನೂ ಕೀಳು ಮಟ್ಟದ ವರದಿಗಾರಿಕೆಗೆ ಬಳಸಿಕೊಳ್ಳುವುದು ಬಹುಷ ಜಿತೇಂದ್ರರಂತವರಿಗೆ ಮಾತ್ರ ಸಾಧ್ಯ