Tuesday, July 29, 2008

ಭೀತಿವಾದಕ್ಕಿಂಥ ಘೋರ ...

ಭಯೋತ್ಪಾದನೆಗಿಂತ ನೀಚ ಕೃತ್ಯಗಳು ಏಕೆ?

ಸುಮ್ಮ ಸುಮ್ಮಗೆ ಹುಸಿ ಕರೆಗಳನ್ನು ಮಾಡುವುದು...ಈಗಾಗಲೇ ಬಳಲಿರುವ ಪೋಲಿಸ್ ಪಡೆಯನ್ನು ಬೇಸ್ತು ಬೀಳಿಸುವುದು ಅಲ್ಲದೆ ಸುಳ್ಳು ಸುದ್ದಿಗಳನ್ನು ಟಿವಿ ಮಾಧ್ಯಮದಲ್ಲಿ ಪದೇ ಪದೇ ಪ್ರಕಟಿಸಿ ಜನರನ್ನು ಹೆದರಿಸುವುದು...ಶಾಲೆ ಮಕ್ಕಳನ್ನು ಬೆದರಿಸಿ ಅವರಲ್ಲಿ ಭೀತಿ ಹುಟ್ಟುವಂತೆ ಮಾಡುವ ಮಂದಿ ಒಂದು ಕಡೆ... ಪೊಲೀಸರು ಏನೇ ಮಾಡಿದರೂ ಅವರನ್ನು ಅವಹೇಳನ ಮಾಡುವುದು...(ಭಯೋತ್ಪಾದಕರನ್ನು ಭಂಧಿಸಿದರೆ ಮಾನವ ಹಕ್ಕು ಉಲ್ಲಂಘನೆ ಎಂದು ಬೊಬ್ಬಿಡುವ ಮಂದಿ ಈಗ ಪೋಲಿಸ್ ವೈಫಲ್ಯ ಎಂದು ಕಿರಿಚಾಡುತ್ತಿದ್ದಾರೆ) ಸೊಳ್ಳೆ ಕಚಿದರೂ ಸರಕಾರವನ್ನು ತೆಗಳುವುದು...ರಾಜ್ಯದಲ್ಲಿ ಏನೇ ಆದರೂ "ರಾಜಿನಾಮೆ ಕೊಡಿ" ಎಂದು ಕಿರಿಚುವ ಮಂದಿ...(ಬೇರೆಯವರ ಆಡಳಿತದಲ್ಲಿ ಅವರ ಪ್ರಧಾನಿಗಳೇ ಭಯೋತ್ಪಾದಕರ ಗುಂಡಿಗೆ ಬಲಿಯಾದ ಘಟನೆ ಅವರಿಗೆ ನೆನಪೇ ಇಲ್ಲ ಪಾಪ) ನಿಜ ಬಾಂಬ್ ಇದ್ದರೂ ಸಿನೆಮ ಶೂಟಿಂಗ್ ನಡೆಯುತ್ತಿದೆ ಎಂಬ ಮಾದರಿಯಲ್ಲಿ ಗುಂಪು ಕೂಡುವ ಭಂಡ ಧೈರ್ಯದ ಜನ...(ಬಾಂಬ್ ಸಿಡಿದು ಸತ್ತರೆ ಪರಿಹಾರ ಗ್ಯಾರಂಟಿ ಎಂದೆ? ಅಥವಾ ಅದಕ್ಕೂ ಭದ್ರತಾ ಲೋಪ ಎಂದು ಬೊಬ್ಬೆ ಹೊಡೆಯಲೇ?)...ಬಾಂಬ್ ಸಿಡಿದಾಗ...ಗಾಯಾಳುಗಳಿಗೆ ಸಹಾಯ ಮಾಡುವ ಬದಲು...ರಸ್ತೆಯಲ್ಲಿ ಗುಂಪುಗೂಡಿ ಟ್ರಾಫಿಕ್ ಜಾಮ್ ಮಾಡಿ ಆಸ್ಪತ್ರೆಗೂ ಹೋಗದಂತೆ ಮಾಡುವ ಮಂದಿ...ಪೊಲೀಸರಿಗೆ ತನಿಖೆ ಮಾಡಲೂ ಬಿಡದ ಮಂದಿ...ಆಸ್ಪತ್ರೆಯಲ್ಲಿ ಎಡತಾಕಿ ವೈದ್ಯರಿಗೆ ರೋಗಿಗಳಿಗೆ ಕಿರಿ ಕಿರಿ ಮಾಡುವ ಮಂದಿ ಹಾಗೂ ಮಾಧ್ಯಮದ ಮಂದಿ...ಹಾಗೆಂದು ಹೇಳಿದರೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ವಾದಿಸುವ ಮಂದಿ... ಅಷ್ಟಾಗಿ ಭಯೋತ್ಪಾದನೆಗೆ ಪರಿಹಾರ ಏನೆಂದು ಹೇಳದೆ ಬರಿಯ ಭೀತಿಕಾರಕ ಅವಹೇಳನಕಾರಿ ಬರಹಗಳನ್ನು ಪ್ರಕಟಿಸುವ ಮಂದಿ ...ಪೊಲೀಸರ ಬಳಿ ಅದಿಲ್ಲ ಇದಿಲ್ಲ ಎಂದು ಬರಹ ಬರೆಸಿ ಭದ್ರತಾ ಪರಿಕರಗಳನ್ನು ಮಾರಿ ಲಾಭ ಹೊಡೆಯುವ ಆಸೆಯಲ್ಲಿರುವ ದಲ್ಲಾಳಿ ಗಳು...

ಇವರೆಲ್ಲರಿಗೂ ಭಯೋತ್ಪಾದಕರಿಗಿಂಥ ನೀಚ ಕೆಲಸ ತಮ್ಮಿಂದ ಆಗುತ್ತಿದೆ ಎಂದು ಗೊತ್ತಿಲ್ಲದಿರುವುದೇ ದೊಡ್ಡ ದುರಂತ...

No comments: