ಮಣಿಪಾಲದ ರಜತಗಿರಿಯಲ್ಲಿ ಉಡುಪಿ ಜಿಲ್ಲಾ ಸಂಕೀರ್ಣ
ಸುಂದರ ವಾಸ್ತು ಹೊಂದಿದ, ಸುಸಜ್ಜಿತ ಜಿಲ್ಲಾ ಸಂಕೀರ್ಣ
ಕಟ್ಟಡ ಕಾಮಗಾರಿ ಮುಗಿಯುವಷ್ಟರಲ್ಲಿ : ಪೆರಂಪಲ್ಲಿ ಅಂಬಾಗಿಲು ರಸ್ತೆ ಅಗಲೀಕರಣ, ಸ್ವರ್ಣಾ ನದಿಗೆ ಸೇತುವೆ , ಹೊಸ ಬಸ್ ರೂಟ್ ಸೇವೆ ಆರಂಭ
ಸರಕಾರದ ಸ್ವಂತ ಜಮೀನಿನಲ್ಲಿ, ಭವಿಷ್ಯದ ಅಗತ್ಯಗಳನ್ನು ಪೂರೈಸುವ ರೀತಿಯ ಯೋಜನೆ.
ಅಪಪ್ರಚಾರದಿಂದ, ಕ್ಷುಲ್ಲಕ ನೆವನಗಳಿಂದ , ವಿವಿಧ ಲಾಬಿಗಳಿಂದ ಯೋಜನೆಗೆ ಹಲವಾರು ಅಡೆ ತಡೆಗಳು...ಈಗ ವಿಘ್ನ ನಿವಾರಣೆ..
ಈಗ ಅದರ ಮೊದಲ ಹಂತದ ಸ್ಲಾಬ್ ಕಾಮಗಾರಿಗೆ ಚಾಲನೆ, ಶಾಸಕ ಶ್ರೀ ರಘುಪತಿ ಭಟ್ಟರಿಂದ...
ಹಿಂದೆ ಶಂಕು ಸ್ಥಾಪನೆಯ ರಿಪೋರ್ಟ್ :
ಮಣಿಪಾಲದ ರಜತ ಗಿರಿ (ಮಣಿಪಾಲ ಯುನಿವೆರ್ಸಿಟಿ ಯ ವೈಸ್ ಚಾನ್ಸಲರ್ ಅವರ ನಿವಾಸದ ಮುಂದಿನ ಪ್ರದೇಶ )
ಅಲ್ಲಿ ಉಡುಪಿ ಗೆ ಜಿಲ್ಲಾಸಂಕೀರ್ಣ
ಮಣಿಪಾಲದಲ್ಲಿ ಸರಕಾರದ ಸ್ವಂತ ಸ್ಥಳದಲ್ಲಿ (ರಜತ ಗಿರಿ)ಜಿಲ್ಲಾ ಕಚೇರಿಗಳ ಸಂಕೀರ್ಣವನ್ನು ನಿರ್ಮಿಸುವ ಕೆಲಸ ಆರಂಭಗೊಂಡಿದ್ದು ಪಂಚಾಂಗದ ಕೆಲಸ ಮುಗಿದು ಸ್ತಂಭಗಳ ರಚನೆಯಾಗುತ್ತಿದೆ. ಒಟ್ಟು 22 ಕೋ.ರೂ. ಯೋಜನೆ ಇದಾಗಿದ್ದು ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಗೃಹ ಮಂಡಳಿಯವರಿಗೆ ಕೆಲಸ ವಹಿಸಿಕೊಡಲಾಗಿದೆ. ಇಲ್ಲಿಗೆ ಉಡುಪಿ, ಕುಂದಾಪುರದಿಂದ ಬರುವವರಿಗೆ ಬೇಕಾದ ರಸ್ತೆ ಮೊದಲಾದ ಸೌಲಭ್ಯವನ್ನು ಒಳಗೊಂಡ ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದ್ದೇವೆ. ಅಲ್ಲಿ ಜಿ.ಪಂ.ಗೂ ಬೇಕಾದ ಸ್ಥಳಾವಕಾಶವಿದೆ. ಈಗ ನಿರ್ಮಿಸಿದ ಕಟ್ಟಡವನ್ನು ಬೇರೆ ಬಳಕೆಗೆ ಬಳಸಿಕೊಳ್ಳಬಹುದು. ಮಣಿಪಾಲದಲ್ಲಿ ಜಿಲ್ಲಾ ಹೆಲಿಪ್ಯಾಡ್ ಕೂಡ ನಿರ್ಮಾಣವಾಗುತ್ತಿದೆ ಎಂದು ಕಟ್ಟಡವನ್ನು ಉದ್ಘಾಟಿಸಿದ ಡಾವಿ.ಎಸ್. ಆಚಾರ್ಯ ಹೇಳಿದರು. (report/ news pics inhttp://www.gulfkannadiga.com/newsdisplay.php?id=9812)
ಚಿತ್ರ, ಸುದ್ದಿ ಕೃಪೆ: www.daijiworld.com