Showing posts with label manohar prasad. Show all posts
Showing posts with label manohar prasad. Show all posts

Thursday, August 14, 2008

ಇಂದಿನ ಕೊನೆ ಮಾತು...

ಅಪಘಾತಗಳನ್ನು ಯಾರೂ ಬೇಕೆಂದು ಮಾಡುವುದಿಲ್ಲ...ಆದರೂ ಶಾಲಾ ಬಸ್ ನದಿಗೆ ಬೀಳಲು ಶಾಲೆಗೆ ರಜೆ ಕೊಡದೆ ಇದ್ದುದೇ ಕಾರಣ ಎಂದು ಬರೆದು, ಜಿಲ್ಲಾ ಆಡಳಿತವನ್ನು ಗೇಲಿ ಮಾಡಿ ಬರೆವ "ಕರಾವಳಿಯ ಸುಂದರ ಪತ್ರಿಕೆಯ" ವರದಿಗಾರರ ಬುದ್ಧಿಗೆ ಏನು ಅನ್ನಬೇಕು?
ನೆರೆ ಪರಿಹಾರ, ಕರಾವಳಿ ಅಭಿವೃದ್ದಿ ಸಭೆ, ಶಾಲಾ ಮಕ್ಕಳ ಬಸ್ ದುರಂತ ಸ್ಥಳಕ್ಕೆ ಭೇಟಿ, ಸಂತ್ರಸ್ತರಿಗೆ ಸಾಂತ್ವನ ...ಇದೆಲ್ಲ ಮಾನವೀಯ ಕಾರ್ಯಕ್ರಮಗಳಲ್ಲಿ ತೊಡಗಿರುವಾಗ...ಬೀದಿರಂಪ ಮಾಡುತ್ತಿರುವ ಕೆಲ ಸಂಘಟನೆಗಳಿಗೆ ಇವು ಯಾವುದೇ ವಿಷಯಗಳು ಕಣ್ಣಿಗೆ ಕಾಣದಿರುವುದು ವಿಶೇಷ!